ಅರಸಿಬೀದಿ ಇದು ಬಿಜಾಪುರ ಜಿಲ್ಲೆಯ ಹುನಗುಂದ ತಾಲೂಕಿನ ಒಂದು ಹಳ್ಳಿ. ಈ ಸ್ಥಳವು ಪಶ್ಚಿಮದ ಚಾಲುಕ್ಯರ ಕಾಲದಲ್ಲಿ ವಿಕ್ರಮಪುರ ಎಂದು ಪ್ರಸಿದ್ಧವಾಗಿತ್ತು. ವಿಕ್ರಮಪುರವನ್ನು ನಾಲ್ಕನೆಯ ವಿಕ್ರಮಾದಿತ್ಯ (೧೦೭೬-೧೧೨೬)ಸ್ಥಾಪಿಸಿದನು. ಇವನ ಕಾಲದಲ್ಲಿ ಚಾಲುಕ್ಯರ ಪ್ರಭಾವ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ವಿಕ್ರಮಾದಿತ್ಯನು ಗೋವಾವನ್ನು ಆಕ್ರಮಿಸಿ, ಉತ್ತರದಲ್ಲಿ ನರ್ಮದಾ ನದಿಯನ್ನು ದಾಟಿ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದನು. ೧೧೫೧ರಲ್ಲಿ ಕಳಚೂರ್ಯರ ದುರಾಕ್ರಮಣದವರೆಗೆ ಈ ಸ್ಥಳವು ಪ್ರಮುಖವಾಗಿತ್ತು. ಈಗ ಇಲ್ಲಿ ಅಳಿದು ಹೋದ ಸಾಮ್ರಾಜ್ಯದ ಕುರುಹುಗಳಾಗಿ ಎರಡು ಜೈನ ಬಸದಿಗಳು ಮತ್ತು ಕೆಲವು ಶಾಸನಗಳಿವೆ. === ಉಲ್ಲೇಖಗಳು ===