ಅಲಿವರ್ದಿಖಾನ್(೧೬೭೧-೧೭೫೬)ಬಂಗಾಳದ ನವಾಬ. ಉದ್ಯಮಶೀಲತೆ ಮತ್ತು ಪರಾಕ್ರಮದಿಂದ ಬಂಗಾಲದ ಆಡಳಿತವನ್ನು ಪಡೆದು 1740-1756ರವರೆಗೆ ಸ್ವತಂತ್ರವಾಗಿ ಆಳಿದವ. ಹಿಂದಿನ ಹೆಸರು ಮಿರ್ಜಾ ಮಹಮದ್ ಅಲಿ. ತಂದೆಯ ಕಡೆಯಿಂದ ಅರಬ್ಬೀಯರ, ತಾಯಿಯ ಕಡೆಯಿಂದ ತುರ್ಕೀಯರ ಸಂಬಂಧ ಉಳ್ಳವ. ಬಿಹಾರ್ ಪ್ರಾಂತ್ಯಾಧಿಕಾರಿ ಷೂಜಾ ಉದ್ದೀನನ ಕೈಕೆಳಗೆ ಕೆಲಸಮಾಡಿ ದಕ್ಷ ಆಡಳಿತಗಾರನೆಂದು ಹೆಸರು ಪಡೆದಿದ್ದ. ಅಧಿಕಾರಕ್ಕೆ ಬಂದುದು ಕ್ರೌರ್ಯದಿಂದ. ಹದಿನಾರು ವರ್ಷಗಳ ಕಾಲ ರಾಜ್ಯವಾಳಿದ. ಆ ಕಾಲದಲ್ಲಿ ಬಂಗಾಲ ಅನೇಕ ಉತ್ಕಟ ಸಮಸ್ಯೆಗಳನ್ನೆದುರಿಸಬೇಕಾಗಿತ್ತು. ಜಮೀನ್ದಾರರೂ ವ್ಯಾಪಾರಿಗಳೂ ಮತ್ತು ಮಿಲಿಟರಿ ಸರದಾರರೂ ಬಂಗಾಲದಲ್ಲಿ ಅಶಾಂತಿಯನ್ನು ಉಂಟುಮಾಡಿದ್ದರು. ಜೊತೆಗೆ ಪರಕೀಯರ ವ್ಯಾಪಾರ ಸಂಸ್ಥೆಗಳನ್ನು ಹತೋಟಿಗೊಳಪಡಿಸಬೇಕಾಗಿತ್ತು. ಮರಾಠರ ದಾಳಿಗಳು ಮತ್ತು ಪಠಾಣರ ದಂಗೆಗಳು ಸಂದಿಗ್ಧ ಪರಿಸ್ಥಿತಿಯನ್ನುಂಟುಮಾಡಿದ್ದುವು. ಬಂಗಾಲದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಲು, ಖಾನ್ ಸಮರ್ಥವಾಗಿ ಹೋರಾಡಿದ. ಹಿಂದೂ ಮತ್ತು ಮಹಮದೀಯ ಅಧಿಕಾರಿಗಳ ಸಹಾಯದಿಂದ ಸುಭದ್ರವಾದ ಆಡಳಿತವನ್ನು ನೀಡಲು ಸತತವಾಗಿ ಪ್ರಯತ್ನಪಟ್ಟ. == ಬಾಹ್ಯ ಸಂಪರ್ಕಗಳು == , - . . , . . , 81-7536-291-, , 2002.