ಅಸ್ಕಾರಿಯಾಸಿಸ್ ಎಂಬದು ಜಂತುಹುಳ ಅಸ್ಕಾರಿಯಾಸಿಸ್ ಲುಂಬ್ರಿಕಾಯ್ಡ್ಸ್. ಪರಾವಲಂಬಿ ಜೀವಿಗಳಿಂದ ಉಂಟಾಗುವ ಒಂದು ರೋಗ. 85%ಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ, ಅದರಲ್ಲೂ ವಿಶೇಷವಾಗಿ ಹುಳುಗಳ ಸಂಖ್ಯೆ ಕಡಿಮೆ ಇದ್ದಲ್ಲಿ ಸೋಂಕಿನ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ರೋಗಲಕ್ಷಣಗಳು ಹೆಚ್ಚಾಗುವುದು ಇರುವಂತಹ ಹುಳುಗಳ ಸಂಖ್ಯೆಯನ್ನವಲಂಬಿಸುತ್ತದೆ ಮತ್ತು ರೋಗಲಕ್ಷಣಗಳು ರೋಗದ ಆರಂಭದಲ್ಲಿ ಉಸಿರಾಟದಲ್ಲಿ ಕಷ್ಟ ಮತ್ತು ಜ್ವರ ನಂತರದ ಕಿಬ್ಬೊಟ್ಟೆ ಊತ, ಕಿಬ್ಬೊಟ್ಟೆ ನೋವು ಮತ್ತು ಅತಿಸಾರ ಒಳಗೊಳ್ಳಬಹುದು. ಬಲು ಸಾಮಾನ್ಯವಾಗಿ ಮಕ್ಕಳು ಇದರ ಪ್ರಭಾವಕ್ಕೊಳ್ಳಗಾಗುತ್ತಾರೆ, ಮತ್ತು ಈ ವಯೋಗುಂಪಿನಲ್ಲಿ ಸೋಂಕು, ಕಡಿಮೆ ತೂಕ ಗಳಿಕೆ ಅಪೌಷ್ಟಿಕತೆ ಮತ್ತು ಕಲಿಕೆಯಲ್ಲಿ ಸಮಸ್ಯೆಗಳನ್ನು ಉಂಟಾಗಬಹುದು. ಮಲದಲ್ಲಿನ ಅಸ್ಕಾರಿಸ್ ಮೊಟ್ಟೆಗಳಿಂದ ಕಲುಷಿತಗೊಂಡ ಆಹಾರ ಅಥವಾ ಪಾನೀಯ ಸೇವನೆಯಿಂದ ಸೋಂಕುಂಟಾಗುತ್ತದೆ. ಮೊಟ್ಟೆಗಳು ಜಠರದಲ್ಲಿ ಒಡೆಯುತ್ತವೆ, ಹೊಟ್ಟೆಯ ಪದರದ ಮೂಲಕ ಕೊರೆದುಕೊಂಡು ಸಾಗುತ್ತಾ ರಕ್ತದ ಮೂಲಕ lಶ್ವಾಸಕೋಶ ಗಳನ್ನು ತಲುಪುತ್ತವೆ. ಅಲ್ಲಿ ಅವು ಗಾಳಿಗೂಡುಗಳನ್ನು ಪ್ರವೇಶಿಸುತ್ತವೆ ಮತ್ತು ಶ್ವಾಸನಾಳದ ಮೂಲಕ ಮೇಲೆ ಸಾಗಿ ಕೆಮ್ಮಲ್ಪಟ್ಟು ಮತ್ತೆ ನುಂಗಲ್ಪಡುತ್ತವೆ. ಇಂತಹ ಮರಿಹುಳುಗಳು ಎರಡನೇ ಬಾರಿ ಹೊಟ್ಟೆಯ ಮೂಲಕ ಜಠರಕ್ಕೆ ಬಂದುಸೇರುತ್ತವೆ ಮತ್ತು ಅಲ್ಲಿ ದೊಡ್ಡ ಹುಳುಗಳಾಗುತ್ತವೆ. ಮುನ್ನೆಚ್ಚರಿಕೆ ಕ್ರಮವು ಶುಚಿತ್ವ ಉತ್ತಮಗೊಳಿಸುವುದು, ಶೌಚಾಲಯಗಳ ಲಭ್ಯತೆಯನ್ನು ಸುಧಾರಿಸುವುದು ಮತ್ತು ಮಲಮೂತ್ರಗಳು ಹೊರ ಸಾಗಿ ಶೌಚಾಲಯಗಳು ಸ್ವಚ್ಛಗೊಳಿಸಲ್ಪಡುವುದನ್ನು ಒಳಗೊಳ್ಳುತ್ತದೆ. ಸೋಪಿನಿಂದ ಕೈತೊಳೆದುಕೊಳ್ಳುವುದು ರಕ್ಷಣಾತ್ಮಕವಾದುದು. 20%ಕ್ಕಿಂತ ಹೆಚ್ಚಿನ ಜನಸಂಖ್ಯೆಯು ಪ್ರಭಾವಕ್ಕೊಳಗಾಗಿರುವ ಪ್ರದೇಶಗಳಲ್ಲಿ, ಪ್ರತಿಯೊಬ್ಬರನ್ನೂ ಆಗಾಗ ಉಪಚರಿಸುವುದನ್ನು ಶಿಫಾರಸು ಮಾಡಲಾಗುತ್ತದೆ. ಸೋಂಕು ಪುನರಾವರ್ತನೆಗಳು ಸಾಮಾನ್ಯ. ಯಾವುದೇ ಲಸಿಕೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುವ ಚಿಕಿತ್ಸೆಗಳೆಂದರೆ [ಅಲ್ಬೆಂಡಜೋಲ್]], ಮೆಬೆಂಡಜೋಲ್, ಲೆವಮಿಸೋಲ್ ಪೈರ್ಯಾಂಟೆಲ್ ಪಮೋಟ್. ಇತರ ಪರಿಣಾಮಕಾರಿ ಏಜೆಂಟುಗಳೆಂದರೆ ಟ್ರೈಬೆಂಡಿಮೈಡೈನ್ ನಿಟಾಜೊಕ್ಸನೈಡ್. ಅಸ್ಕಾರಿಯಾಸಿಸ್ ಪ್ರಭಾವಕ್ಕೆ ಒಳಗಾದ ಬಹಳ ಹೆಚ್ಚಿನ ಜನಸಂಖ್ಯೆ ಸಬ್-ಸಹಾರನ್ ಆಫ್ರಿಕಾ, ಲ್ಯಾಟಿನ್ ಅಮೇರಿಕಾ, ಮತ್ತು ಏಷ್ಯಾದಲ್ಲಿ ಕಂಡುಬಂದಿದ್ದು, ಸುಮಾರು 0.8 ರಿಂದ 1.2 ಬಿಲಿಯನ್ ಜನರು ಜಾಗತಿಕ ಮಟ್ಟದಲ್ಲಿ ಇದನ್ನು ಹೊಂದಿದ್ದಾರೆ. ಇದು, ಅಸ್ಕಾರಿಯಾಸಿಸ್ ಅನ್ನು ಅತ್ಯಂತ ಸಾಮಾನ್ಯ ರೂಪದ ಮಲಪದಾರ್ಥದ ಮೂಲಕ ವರ್ಗಾಂತರಗೊಳ್ಳುವ ಜಂತುರೋಗವನ್ನಾಗಿ ಮಾಡುತ್ತದೆ. ಸಾವಿನ ಸಂಖ್ಯೆ 1990ರಲ್ಲಿ 3,400 ಆಗಿದ್ದು, 2010ರ ಪ್ರಕಾರ ಸುಮಾರು 2,700 ಆಗಿತ್ತು. ಮತ್ತೊಂದು ಬಗೆಯ ಅಸ್ಕಾರಿಸ್ ಹಂದಿಗಳಿಗೆ ಸೋಂಕನ್ನುಂಟುಮಾಡುತ್ತದೆ. == ==