ಅಹ್ಮದಾಬಾದ್ ಗುಜರಾತ್ ರಾಜ್ಯದ ಪೂರ್ವ ರಾಜಧಾನಿ. ಇದು ಭಾರತದ ಪ್ರಮುಖ ಕೈಗಾರಿಕಾ ನಗರಗಳಲ್ಲೊಂದು. ಗುಜರಾತಿನ ಅತಿ ದೊಡ್ಡ ನಗರವಾದ ಇದು, ಭಾರತದ ೫ನೇ ದೊಡ್ಡ ನಗರ. ೫ ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆ ಈ ನಗರದ್ದು. ಅಹ್ಮದಾಬಾದ್ ನಗರ ಕೆಲವೊಮ್ಮೆ ಕರ್ನಾವತಿ (ಹಳೆಯ ಹೆಸರು) ಎಂದೂ ಕೆಲವೊಮ್ಮೆ ಅಮ್ದವಾದ್ (ಗುಜರಾತಿ ಭಾಷೆಯಲ್ಲಿ ಉಚ್ಛರಿಸಿದಂತೆ) ಕರೆಯಲ್ಪಡುತ್ತದೆ.ಇದನ್ನು ಪೂರ್ವದ ಮ್ಯಾಂಚೆಸ್ಟರ್ ಎಂದೂ ಕರೆಯುತ್ತಿದ್ದರು. ಅಹ್ಮದಾಬಾದ್ ಪಟ್ಟಣವನ್ನು ೧೫ನೇ ಶತಮಾನದಲ್ಲಿ ಸುಲ್ತಾನ್ ಅಹ್ಮದ್ ಶಾ ಸಾಬರಮತಿ ನದಿ ತೀರದಲ್ಲಿ ಸ್ಥಾಪಿಸಿದನಂತೆ. ಗುಜರಾತಿನ ಸುಲ್ತನತೆಯ ರಾಜಧಾನಿಯೂ ಈ ನಗರ ಅಗಿತ್ತು ಎಂದು ಐತಿಹಾಸಿಕ ಮೂಲಗಳು ತಿಳಿಸುತ್ತವೆ. == ಉಲ್ಲೇಖಗಳು ==