ಆ ಕನ್ನಡ ವರ್ಣಮಾಲೆಯ ಎರಡನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಇದು ಕನ್ನಡದ ವರ್ಣಮಾಲೆಯಲ್ಲಿ ಗುತಿಸಬಹುದಾದ ದೀರ್ಘಸ್ವರ. ಎರಡು ಅ ಗಳು ಸೇರಿದಾಗ ಆ ಆಗುತ್ತದೆ. ಎಂದರೆ ಅ+ಅ=ಆ ಇದನ್ನು ಸವರ್ಣದೀರ್ಘ ಸಂಧಿ ಎಂದು ಕರೆಯುತ್ತಾರೆ. ಅ ಮತ್ತು ಆ ಈ ಎರಡು ಸ್ವರಗಳನ್ನು ನಾಮಿಸ್ವರಗಳು ಎಂದು ಕರೆಯುತ್ತಾರೆ. == ಚಾರಿತ್ರಿಕ ಹಿನ್ನೆಲೆ == ಕನ್ನಡ ವರ್ಣಮಾಲೆಯಲ್ಲಿ ಎರಡನೆಯ ಅಕ್ಷರವಾದ ಆಕಾರ ಕ್ರಿ,ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯಲ್ಲಿ ಪ್ರತ್ಯೇಕ ರೂಪವನ್ನು ತಾಳದೆ, ಆಕಾರಕ್ಕೆ ದೀರ್ಘವನ್ನು ಸೂಚಿಸುವ ಒಂದು ಸಣ್ಣ ರೇಖೆಯನ್ನು ಮಾತ್ರ ಒಳಗೊಂಡಿದೆ. ಈ ರೂಪವೇ ಶಾತವಾಹನ, ಕದಂಬ, ಗಂಗ. ಬಾದಾಮಿ ಚಾಲುಕ್ಯರ ಕಾಲಗಳಲ್ಲೂ ಮುಂದುವರಿದಿದೆ. ಈ ಕಾಲದ ರೂಪಗಳಲ್ಲಿ ದೀರ್ಘಸೂಚಕ ರೇಖೆ ಡೊಂಕಾಗುತ್ತ ಹೋಗಿ, ಕೊನೆಗೆ ಹೊಯ್ಸಳರ ಕಾಲದಲ್ಲಿ ಒಂದು ಸಣ್ಣ ಕೊಂಡಿಯ ಆಕಾರವನ್ನು ಪಡೆದಿದೆ. ಕ್ರಿ.ಶ ಹದಿನೈದನೆಯ ಶತಮಾನದ ವಿಜಯನಗರ ಕಾಲದ ಶಾಸನಗಳಲ್ಲಿ ಈ ಕೊಂಡಿ ಅಕ್ಷರಕ್ಕೆ ಸೇರಿಕೊಂಡಿದೆ. ಈ ರೂಪವೇ ಮುಂದಿನ ಶತಮಾನಗಳಲ್ಲಿ ಮುಂದುವರಿದು ಈಗಿನ ಆಕಾರವಾಗಿದೆ. == ಭಾಷಾವಿಜ್ಞಾನ ಹಿನ್ನೆಲೆ == ಕನ್ನಡ ವರ್ಣಮಾಲೆಯ ಈ ಎರಡನೆಯ ಅಕ್ಷರ ವಿವೃತ ಮಧ್ಯ ಅಗೋಲ ದೀರ್ಘ ಸ್ವರವನ್ನು ಸೂಚಿಸುತ್ತದೆ. == ಸ್ವರಾಕ್ಷರಗಳು ಎಂದರೇನು ? == ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್. ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ, ಅ,ಆ, ಇ, ಈ, ಉ, ಊ, ಋ, ೠ, ಌ, ೡ, ಏ, ಐ, ಓ, ಔ. ಌ = ಲುೃ ಗೆ ಹತ್ತಿರವಾದ ಉಚ್ಚಾರ ೡ = ಲೂೃ ಗೆ ಹತ್ತಿರವಾದ ಉಚ್ಚಾರ === ದೀರ್ಘಸ್ವರ === ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ೠ, ೡ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಆ ಅಕ್ಷರವೂ ಒಂದಾಗಿದೆ. == ಕನ್ನಡದ ನಾವಿ ಸ್ವರಗಳು == ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ. == ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನ == == ಆ ದಿಂದ ಆರಂಭವಾಗುವ ನಾಮಪದಗಳು == ಎರಡಕ್ಷರದ ಪದಗಳು : ಆಟ ಆಡು ಆನೆ ಇತ್ಯಾದಿ ಮೂರಕ್ಷರದ ಪದಗಳು : ಆಕಳು == ಆ ದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು == ಆರು ಆರುನೂರು ಆರು ಸಾವಿರ == ಉಲ್ಲೇಖ ==