ಆಂಸ್ಟರ್ಡ್ಯಾಮ್ ನೆದರ್ಲ್ಯಾಂಡ್ಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೭೪೭,೨೯೦ ಜನಸಂಖ್ಯೆ ಇರುವ ಈ ನಗರ ದೇಶದ ಪಶ್ಚಿಮ ಭಾಗದಲ್ಲಿರುವ ಉತ್ತರ ಹಾಲೆಂಡ್ ಪ್ರದೇಶದಲ್ಲಿ ಒಳಪಟ್ಟಿದೆ. ಆಂಸ್ಟೆಲ್ ನದಿಗೆ ಇರುವ ಅಣೆಕಟ್ಟಿನಿಂದಾಗಿ(ಆಂಗ್ಲದಲ್ಲಿ ಡ್ಯಾಮ್) ಈ ನಗರಕ್ಕೆ ಆಂಸ್ಟರ್ಡ್ಯಾಮ್ ಎಂದು ಹೆಸರು ಬಂದಿದೆ.. ಇದು ನೆದರ್ಲ್ಯಾಂಡ್ಸ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದು, ವಿಶ್ವದ ೫೦೦ ಅತ್ಯಂತ ದೊಡ್ಡ ಕಂಪೆನಿಗಳಲ್ಲಿ ೭ ಈ ನಗರದಲ್ಲಿ ಸ್ಥಿತವಾಗಿವೆ. ಇದರಲ್ಲಿ ಫಿಲಿಪ್ಸ್ ಮತ್ತು ಐ.ಎನ್.ಜಿ ಕೂಡ ಇವೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಸರ್ಕಾರದ ಅಧಿಕೃತ ಅಂತರಜಾಲ ತಾಣ ಪ್ರವಾಸೋದ್ಯಮ ಇಲಾಖೆಯ ತಾಣ ವಿಕಿಟ್ರವೆಲ್‌ನಲ್ಲಿ ಆಂಸ್ಟರ್ಡ್ಯಾಮ್