ಆಕಾಶಮಲ್ಲಿಗೆ( )ಮ್ಯಾನ್ಮಾರ್ ದೇಶದ ಮೂಲವಾಸಿ.ಭಾರತದಲ್ಲಿ ಅಲಂಕಾರಕ್ಕೆ ಉದ್ಯಾನವನಗಳಲ್ಲಿ,ಸಾಲುಮರಗಳಾಗಿ ಅಲ್ಲಲ್ಲಿ ಬೆಳೆಸಲಾಗಿದೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಬಿಗ್ನೋನಿಯೆಸಿ ()ಕುಟುಂಬಕ್ಕೆ ಸೇರಿದ್ದು,ಮಿಲ್ಲಿಂಗ್ಟೋನಿಯ ಹೊರ್ಟೆನ್ಸಿಸ್( )ಎಂದು ಸಸ್ಯಶಾಸ್ತ್ರೀಯ ಹೆಸರು.ಬಳಕೆಯಲ್ಲಿ ಇಂಡಿಯನ್ ಕಾರ್ಕ್ ಟ್ರೀ ಎಂದು ಕರೆಯುತ್ತಾರೆ. == ಸಸ್ಯದ ಗುಣಲಕ್ಷಣಗಳು == ಸಾದಾರಣ ಎತ್ತರಕ್ಕೆ ಬೆಳೆಯುವ ಈ ಮರ ಶಂಖುವಿನ ಆಕಾರದ ಹಂದರದಿಂದ ಅಂದವಾಗಿ ಕಾಣುತ್ತದೆ.ಸೆಪ್ಟೆಂಬರ್-ನವೆಂಬರ್ ತಿಂಗಳಲ್ಲಿ ಬಿಳಿಯ ಕೊಳವೆಯಾಕಾರದ ಹೂಗೊಂಚಲುಗಳು ಜೋತು ಬಿದ್ದಿರುವುದು.ತೊಗಟೆಯಿಂದ ಬಿರಟೆ ()ದೊರೆಯುತ್ತದೆ.ದಾರುವು ಹಳದಿ ಛಾಯೆಯ ಬಿಳಿ ಬಣ್ಣದ್ದಾಗಿದ್ದು,ಮೃದುವಾಗಿದೆ. == ಉಪಯೋಗಗಳು == ತೊಗಟೆಯಿಂದ ಬಿರಟೆ,ದಾರುವು ಟೀ ಪೆಟ್ಟಿಗೆ,ಅಲಂಕಾರ ವಸ್ತುಗಳ ತಯಾರಿಕೆ ಮುಂತಾದ ಕೆಲಸಗಳಿಗೆ ಒದಗುತ್ತದೆ.ಕಾಗದ ಹಾಗೂ ರೆಯಾನ್ ತಯಾರಿಕೆ ಸೂಕ್ತ.ತೊಗಟೆಯು ಜ್ವರ ನಿವಾರಕ ಎಂದು ಹೇಳಲಾಗಿದೆ. === ಛಾಯಾಂಕಣ === == ಆಧಾರ ಗ್ರಂಥಗಳು == 'ವನಸಿರಿ':ಅಜ್ಜಂಪುರ ಕೃಷ್ಣಸ್ವಾಮಿ.