ರೇಡಿಯೋ ಲೇಖನಕ್ಕಾಗಿ ಇಲ್ಲಿ ನೋಡಿ. ಆಕಾಶವಾಣಿ ಸಂಸ್ಕೃತ ಮೂಲದ ಒಂದು ಶಬ್ದ. ಇದರರ್ಥ "ಆಕಾಶದಿಂದ ಬರುವ ಘೋಷಣೆ" ಅಥವಾ "ಸ್ವರ್ಗದಿಂದ ಬರುವ ಧ್ವನಿ". ರೇಡಿಯೋದ ವಿಷಯದಲ್ಲಿ "ಆಕಾಶವಾಣಿ" ಶಬ್ದವನ್ನು ಎಮ್.ವಿ. ಗೋಪಾಲಸ್ವಾಮಿ ಮೊದಲು ಬಳಸಿದರು. ೧೯೩೬ರಲ್ಲಿ, ತಮ್ಮ ನಿವಾಸದಲ್ಲಿ ರಾಷ್ಟ್ರದ ಮೊದಲ ಖಾಸಗಿ ರೇಡಿಯೋ ಕೇಂದ್ರವನ್ನು ಸ್ಥಾಪಿಸಿದ ನಂತರ ಅವರು ಈ ಶಬ್ದವನ್ನು ಬಳಸಿದರು. ಭಾರತದ ಸಾರ್ವಜನಿಕ ರೇಡಿಯೋ ಪ್ರಸಾರ ಕೇಂದ್ರವಾದ ಅಖಿಲ ಭಾರತ ಬಾನುಲಿ ಕೇಂದ್ರವು ೧೯೫೬ರಲ್ಲಿ ತನ್ನ ಪ್ರಸಾರ ಹೆಸರನ್ನು ಆಕಾಶವಾಣಿ ಎಂದು ಅಳವಡಿಸಿಕೊಂಡಿತು. ಒಂದು ಪ್ರಸಾರ ಕೇಂದ್ರಕ್ಕೆ ಈ ಪದ ಹೆಚ್ಚು ಸೂಕ್ತವೆಂದು ಅನಿಸಿತು. == ಉಲ್ಲೇಖಗಳು ==