ಆಕ್ರಾ ಆಫ್ರಿಕದ ಪಶ್ಚಿಮ ಭಾಗದಲ್ಲಿ ಕಾಮನ್‍ವೆಲ್ತ್ ಗಣರಾಜ್ಯವೆನಿಸಿಕೊಂಡಿರುವ ಘಾನದ ರಾಜಧಾನಿ, ರೇವು. ಅತಿ ದೊಡ್ಡ ಪಟ್ಟಣ. ಜನಸಂಖ್ಯೆ ಸು.೨೨.೭ ಲಕ್ಷas 2012. . ಹಿಂದೆ ಇದು ಬ್ರಿಟಿಷರ ವಸಾಹತಾಗಿದ್ದ ಗೋಲ್ಡ್ ಕೋಸ್ಟ್‍ಗೆ ಸೇರಿತ್ತು. ಬ್ರಿಟಿಷರ, ಫ್ರೆಂಚರ ಮತ್ತು ಡಚ್ಚರ ಕೋಟೆಗಳು ಇವೆ. == ಸಾರಿಗೆ == ಇತ್ತೀಚೆಗೆ ರಸ್ತೆ ಮತ್ತು ರೈಲು ಮಾರ್ಗಗಳು ಉತ್ತಮ ಸ್ಥಿತಿಯಲ್ಲಿ ಬೆಳೆದಿರುವುದರಿಂದ ಸಾರಿಗೆ ಅನುಕೂಲತೆ ಈ ಪಟ್ಟಣಕ್ಕೆ ಚೆನ್ನಾಗಿ ದೊರೆತಿದೆ. == ವಾಣಿಜ್ಯ == ಸಾಬೂನು ಮತ್ತು ಕೀಟನಾಶಕ ರಾಸಾಯನಿಕ ವಸ್ತುಗಳ ತಯಾರಿಕೆ ಹೆಚ್ಚಾಗಿ ಬೆಳೆದಿದೆ. ಬಹುವಾಗಿ ಕೊಕೊ ರಫ್ತಾಗುತ್ತದೆ. ಒಂದು ವಿಶ್ವವಿದ್ಯಾನಿಲಯವಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==