ಆಕ್ಸಿಟೆಟ್ರಸೈಕ್ಲೀನ್ ಅಗಲರೋಹಿತ ಜೀವಿವಿರೋಧಕಗಳ (ಬ್ರಾಡ್ - ಸ್ಪೆಕ್ಟ್ರಂ ಆಂಟಿಬಯೋಟಿಕ್ಸ್) ಗುಂಪಿನ ಮದ್ದುಗಳಲ್ಲಿ ಒಂದು. == ತಯಾರಿಕೆ == ಮೊಟ್ಟಮೊದಲು (1950) ಫಿಂಡ್ಲೆ ಮತ್ತು ಸಂಗಡಿಗರು ತಯಾರಿಸಿದರು. ಮದ್ದು ತಯಾರಕರ ವ್ಯಾಪಾರದ ಹೆಸರು ಟೆರೆಮೈಸಿಸ್. ಮೊದಲಿಗೆ ಇದನ್ನು ಮಣ್ಣಲ್ಲಿರುವ ಕಿರಣಣಬೆ ಸ್ಟ್ರೆಪ್ಟೊಮೈಸಿಸ್ ರೈಮೋಸಸನ್ನು ತಳಿಯೆಬ್ಬಿಸಿ ಬಂದ ರಸದಿಂದ ಹರಳುಗಳಾಗಿ ತಯಾರಿಸಿದ್ದರೂ ಈಗ ಇದು ಕೃತಕವಾಗೂ ತಯಾರಾಗುತ್ತಿದೆ. == ವೈದ್ಯಕೀಯ ಉಪಯೋಗಗಳು == ಇದರ ಹೈಡ್ರೊಕ್ಲೋರೈಡು, ಹೈಡ್ರೇಟು ಲವಣಗಳಿಂದ ಗ್ರಾಂ ಬಣ್ಣವೇರದ, ಗ್ರಾಂ ಬಣ್ಣವೇರುವ (ಗ್ರಾಂ-ನೆಗೆಟಿವ್, ಗ್ರಾಂ-ಪಾಸಿಟಿವ್) ಏಕಾಣುಜೀವಿಗಳು, ರಿಕೆಟ್ಸ್ ರೋಗಾಣುಗಳು (ರಿಕೆಟ್ಸಿಯಾಸ್), ಕೆಲವು ದೊಡ್ಡ ವಿಷಕಣಗಳು, ಕೆಲವು ಮುಂಜೀವಿ ಪರಪಿಂಡಿಗಳೂ ಸಾಯುತ್ತವೆ. ಇಲ್ಲವೇ ಗುಣಿತವಾಗುವುದನ್ನು ಅಣಗಿಸುತ್ತವೆ. ಚಲ್ಕಣದ (ಅಮೀಬಿಕ್) ರಕ್ತಭೇದಿ, ವಿಷಮಶೀತ ಜ್ವರಗಳಲ್ಲೂ ಕೊಡುವುದುಂಟು. ಕ್ಷಯ, ಕುಷ್ಠ, ಬೂಷ್ಟಿನ (ಅಣಬೆ) ರೋಗಗಳಲ್ಲಿ ಕೆಲಸಕ್ಕೆ ಬರದು. ಬಾಯಿ ಮೂಲಕ ಕೊಡುವುದು ಸಾಮಾನ್ಯ; ರಕ್ತನಾಳಾಂತರವಾಗೂ, ಒಂದೆಡೆ ಹಚ್ಚುವ ದ್ರಾವಣವಾಗೂ ಕೊಡಬಹುದು. == ಪಾರ್ಶ್ವ ಪರಿಣಾಮಗಳು == ಯಾವಾಗಲೂ ಕರುಳಲ್ಲಿ ಇದ್ದೇ ಇರುವ ಏಕಾಣುಜೀವಿಗಳನ್ನು ಇದು ಹಾಳುಮಾಡಿ ತೊಂದರೆ ಕೊಡಬಹುದು. ಮಜ್ಜಿಗೆ ಸೇವನೆಯಿಂದ ಇದು ಸರಿಹೋಗುತ್ತದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು ==