ಆಗಸ್ಟಾ ಇಟಲಿಯ ದಕ್ಷಿಣಕ್ಕಿರುವ ಸಿಸಿಲಿದ್ವೀಪದ ಸಿರಾಕ್ಯೂಸ್ ಪ್ರಾಂತ್ಯದ ಒಂದು ಬಂದರು. ಆಗೂಸ್ಟಾ ಎಂದೂ ಕರೆಯುತ್ತಾರೆ. == ನಿರ್ಮಾಣ == ಇದನ್ನು ಆಗಸ್ಟಸ್ ಎಂಬಾತ ಕ್ರಿ.ಪೂ. 42ರಲ್ಲಿ ನಿರ್ಮಿಸಿದ. 1693ರ ಭೂಕಂಪದಿಂದಲೂ 1943ರ ಮಹಾಯುದ್ಧದಿಂದಲೂ ನಾಶಹೊಂದಿತು. ಹೊಸದಾಗಿ ಊರು ಈಗ ಬೆಳೆಯುತ್ತಿದ್ದು ನಾವಿಕಪಡೆಯ ನೆಲೆಯಾಗಿದೆ. == ವಾಣಿಜ್ಯ == ಆಲಿವ್ ಎಣ್ಣೆ, ದ್ರಾಕ್ಷಾರಸ, ಹಣ್ಣು, ಮೀನು, ಉಪ್ಪು -ಮುಂತಾದುವುಗಳ ವಾಣಿಜ್ಯ ಕೇಂದ್ರವಾಗಿದೆ. == ಜನಸಂಖ್ಯೆ == ಜನಸಂಖ್ಯೆ ; ೩೪,೫೩೯ (೨೦೧೦). == ಇತರ ನಗರಗಳು == ಪ್ರಾಚೀನ ಇಟಲಿಯಲ್ಲಿ ಆಗೂಸ್ಟಾ ಎಂಬ ಹೆಸರಿನ ಅನೇಕ ಪಟ್ಟಣಗಳಿದ್ದವು. ಆಗಸ್ಟಾ ಎಂಬ ಹೆಸರಿನ ಪಟ್ಟಣಗಳು ಅಮೆರಿಕ ಸಂಯುಕ್ತ ಸಂಸ್ಥಾನದ ಜಾರ್ಜಿಯಾ, ಕಾನ್ಸಾಸ್, ಮತ್ತು ಮೇನ್ ಪ್ರಾಂತ್ಯಗಳಲ್ಲಿವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2018-01-30 ವೇಬ್ಯಾಕ್ ಮೆಷಿನ್ ನಲ್ಲಿ. - 2016-03-04 ವೇಬ್ಯಾಕ್ ಮೆಷಿನ್ ನಲ್ಲಿ.