ಆಗಸ್ಟ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಎಂಟನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಆಗಸ್ಟ್ ವಿಶ್ವದ ಉತ್ತರಾರ್ಧದಲ್ಲಿ ಬೇಸಿಗೆಯ ಕೊನೆಯ ತಿಂಗಳು ಹಾಗೂ ದಕ್ಷಿಣಾರ್ಧದಲ್ಲಿ, ಇದು ಚಳಿಗಾಲದ ಕೊನೆಯ ತಿಂಗಳು. ಇದಕ್ಕೆ ಮೊದಲ ರೋಮನ್ ಚಕ್ರವರ್ತಿ ಅಗಸ್ಟಸ್ ಸೀಸರ್ ಅವರ ಹೆಸರನ್ನು ಇಡಲಾಗಿದೆ. == ಆಗಸ್ಟ್ ತಿಂಗಳು == ಆಗಸ್ಟ್ ನ ಅರ್ಥವು ಪ್ರಾಚೀನ ರೋಮ್ ನಿಂದ ಬಂದಿದೆ: ಅಗಸ್ಟಸ್ ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ "ಪೂಜ್ಯ" ಅಥವಾ "ಮಹಾನ್" ಎಂದು. ಇದು ಮೊದಲ ರೋಮನ್ ಚಕ್ರವರ್ತಿ ಗೈಯಸ್ ಸೀಸರ್‌ಗೆ ನೀಡಲಾದ ಬಿರುದು. ರೋಮನ್ ಸೆನೆಟ್ ಕ್ರಿ.ಪೂ ೮ ರಲ್ಲಿ ಚಕ್ರವರ್ತಿಯ ಗೌರವಾರ್ಥವಾಗಿ ಒಂದು ತಿಂಗಳಿಗೆ ಹೆಸರಿಡಲು ನಿರ್ಧರಿಸಿತು. ಅವರು ಹಳೆಯ ರೋಮನ್ ತಿಂಗಳಾದ ಸೆಕ್ಸ್ಟಿಲಿಯಸ್ ಅನ್ನು ಆಯ್ಕೆ ಮಾಡಿದರು ಮತ್ತು ಅದಕ್ಕೆ ಅಗಸ್ಟಸ್ ಎಂದು ಮರುನಾಮಕರಣ ಮಾಡಿದರು. == ಚಿಹ್ನೆಗಳು == ಆಗಸ್ಟ್ ನ ಜನ್ಮಶಿಲೆಗಳೆಂದರೆ ಪೆರಿಡಾಟ್, ಸರ್ಡೋನಿಕ್ಸ್ ಮತ್ತು ಸ್ಪೈನೆಲ್. ಇದರ ಜನ್ಮ ಹೂವು ಗ್ಲಾಡಿಯೋಲಸ್ ಅಥವಾ ಗಸಗಸೆ ಹಾಗೂ ಇದರರ್ಥ ಸೌಂದರ್ಯ, ಪಾತ್ರದ ಶಕ್ತಿ, ಪ್ರೀತಿ, ಮದುವೆ ಮತ್ತು ಕುಟುಂಬ ಎಂಬುದಾಗಿದೆ. ಪಶ್ಚಿಮ ರಾಶಿಚಕ್ರ ಚಿಹ್ನೆಗಳೆಂದರೆ ಸಿಂಹ- ಆಗಸ್ಟ್ ೨೨ ರವರೆಗೆ ಮತ್ತು ಕನ್ಯಾ- ಆಗಸ್ಟ್ ೨೩ ರಿಂದ. == ರಜೆಗಳು / ಆಚರಣೆಗಳು == ಐರ್ಲ್ಯಾಂಡ್ ದೇಶದ ಹಲವು ಪ್ರಸಿದ್ಧ ಕದನಗಳು ಈ ತಿಂಗಳಿನಲ್ಲಿ ಸಂಭವಿಸಿವೆ. ಆಗಸ್ಟ್ ೧ - ಸ್ವಿಟ್ಜರ್ಲ್ಯಾಂಡ್ ದೇಶದ ರಾಷ್ಟ್ರೀಯ ದಿನ, ರಾಷ್ಟ್ರೀಯ ರಜೆ. ಆಗಸ್ಟ್ ೬ - ೧೮೦೬ರಲ್ಲಿ ರೋಮನ್ ಸಾಮ್ರಾಜ್ಯದ ದೊರೆಯಾಗಿದ್ದ ದೊರೆ ಫ್ರಾನ್ಸಿಸ್-೨ ನಿಂದ ರಾಜ ಪದವಿ ತ್ಯಾಗ. ಆಗಸ್ಟ್ ೬ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ಹಿರೋಶಿಮಾ ನಗರದ ಮೇಲೆ ಅಣುಬಾಂಬ್ ದಾಳಿ. ಆಗಸ್ಟ್ ೯ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ ಜಪಾನ್ ದೇಶದ ನಾಗಾಸಾಕಿ ನಗರದ ಮೇಲೆ ಆಣುಬಾಂಬ್ ದಾಳಿ. ಆಗಸ್ಟ್ ೯ - ೧೯೬೫ರಲ್ಲಿ ಮಲೇಷಿಯಾದಿಂದ ಬೇರ್ಪಡೆ ಹೊಂದಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ ಸಿಂಗಾಪುರ. ಆಗಸ್ಟ್ ೧೪ - ೧೯೪೭ರಲ್ಲಿ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾದ ದಿನ. ಆಗಸ್ಟ್ ೧೫ - ೧೭೬೯ರಲ್ಲಿ ಕೊರ್ಸಿಕಾದಲ್ಲಿ ನೆಪೋಲಿಯನ್ ಬೋನಾಪಾರ್ಟೆಯ ಜನನ. ಆಗಸ್ಟ್ ೧೫ - ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ದಿನ. ಈ ದಿನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಹಾಗೂ ರಾಷ್ಟ್ರೀಯ ರಜೆಯ ದಿನವಾಗಿದೆ. ಆಗಸ್ಟ್ ೧೫ - ೧೯೪೫ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಅಣುಬಾಂಬ್ ದಾಳಿಯ ನಂತರ ಜಪಾನಿನ ದೊರೆ ಹಿರೋಹಿಟೊನಿಂದ ಜಪಾನಿನ ಶರಣಾಗತಿಯ ಘೋಷಣೆ. == ಉಲ್ಲೇಖಗಳು ==