ಆದಯ್ಯ ೧೧ನೇ ಶತಮಾನದ ಉತ್ತರಾರ್ಧ ಮತ್ತು ೧೨ನೇ ಶತಮಾನದಲ್ಲಿದ್ದ ಸೌರಾಷ್ಟ್ರ ಪ್ರಾಂತ್ಯದಲ್ಲಿದ್ದ ಹಿರಿಯ ಶಿವಶರಣರು, ವಚನಕಾರರು. ಜೇಡರದಾಸಿಮಯ್ಯ ಮತ್ತು ಗುರುಬಸವಣ್ಣನವರ ಸಮಕಾಲೀನರು. ಇವರ ವಚನಗಳಲ್ಲಿ ಅಂದು ಪ್ರಚಲಿತ-ಅಪ್ರಚಲಿತರಾಗಿದ್ದ ವಚನಕಾರರೆಲ್ಲರ ಹೆಸರು ಉಲ್ಲೇಖ ಗೊಂಡಿರುವುದನ್ನು ಪರಿಶೀಲಿಸಬಹುದಾಗಿದೆ. ಈ ಶರಣರ ಪುಣ್ಯಸ್ತ್ರೀಯ ಹೆಸರು ಪದ್ಮಾವತಿ. ಇವರ ವಚನಗಳ ಅಂಕಿತ ಸೌರಾಷ್ಟ್ರ ಸೋಮೇಶ್ವರ. == ಉಲ್ಲೇಖಗಳು ==