ಆನಂದಕಂದಕನ್ನಡ ನಾಡಿನ ಸಾಹಿತಿಗಳಲ್ಲಿ ಅಗ್ರಗಣ್ಯರು. 'ಆನಂದಕಂದ' ಕಾವ್ಯನಾಮ ಅವರ ಬರವಣಿಗೆಯ ಅಂಕಿತ. ಬೆಟಗೇರಿ ಕೃಷ್ಣಶರ್ಮ ನಾಮಧೇಯ. ಎರಡೂ ಹೆಸರುಗಳಿಂದ ಇವರು ಕನ್ನಡದಲ್ಲಿ ಸಾಹಿತ್ಯ ಸೃಷ್ಟಿಸಿದ್ದಾರೆ. ಕವನ ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಾಂಪಾದನೆ ಇವುಗಳಲ್ಲಿಯೂ ಪ್ರಥಮ ದರ್ಜೆಯ ಕಾರ್ಯ ಆನಂದಕಂದರದು. ಆರು ದಶಕ ಗಳಿಗೂ ಸ್ವಾತಂತ್ರ್ಯ ಪ್ರಾಪ್ತಿ ಕರ್ನಾಟಕತ್ವದ ಜಾಗ್ರತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನು ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು. ಬದುಕು ೧೯೦೦ನೆಯ ಏಪ್ರಿಲ್ ತಿಂಗಳ ೧೬ರಂದು ಗೋಕಾಕ ತಾಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನನ ತಾಳಿದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ಪಿತೃ ವಿಯೋಗ. ೧೯೧೪ರಲ್ಲಿ ವಿಷಮಶೀತ ಜ್ವರದ ಆಕ್ರಮಣ. ೨೧ ದಿನಗಳ ಹೋರಾಟದ ನಂತರ ರೋಗದ ಹಿಡಿತ ತಪ್ಪಿ ಬದುಕಿದುದು ಒಂದು ಪವಾಡ. ಹದಿನೆಂಟರ ಹರೆಯದ ಮಧುರ ದಿನಗಳನ್ನು ಎದುರುಗೊಳ್ಳುತ್ತಿರುವಾಗಲೇ ತಾಯಿ ವರಣವನ್ನಪ್ಪಿದಳು. ಹೀಗೆ ಜೀವನದ ಜವಾಬ್ದಾರಿ ಶ್ರೀ ಬೆಟಗೇರಿಯವರ ಮೈಮೇಲೆ ಬಿದ್ದಿತು. ಹುಟ್ಟು ಪ್ರತಿಭಾ ವಂತರೂ, ಜೀವನಾನುಭವಿಗಳೂ ಆದ ಬೆಟಗೇರಿಯವರ ಹದಗೊಂಡ ಮನಸ್ಸು ಆ ವೇಳೆಗಾಗಲೇ ಗರಿಗೆದರಿತ್ತು. ತನ್ನ ಸೃಷ್ವ್ಯಾತ್ಮರು ಶಕ್ತಿಯ ಅಭಿವ್ಯಕ್ತಿಗಾಗಿ ಹಾತೊರೆಯುತ್ತಲಿತ್ತು. ಈ ಶತಮಾನದ ಇಪ್ಪತ್ತನೆಯ ದಶಕವು ಸ್ವಾತಂತ್ರಕ್ಕಾಗಿ ಭಾರತ ದೇಶ ತವಕಿಸುತ್ತಿದ್ದ ಕಾಲ. ಸಕಲರಲ್ಲಿ ರಾಷ್ವ್ರೀಯತೆ ಜಾಗ್ರತವಾಗುತ್ತಲಿದ್ದ ಸಮಯ. ಕರ್ನಾಟಕದ ಸಿಂಹರೆನಿಸಿದ್ದ ಶ್ರೀ ಗಂಗಾಧರರಾವ್ ದೇಶಪಾಂಡೆ ಮುಂತಾದವರ ಸಂಪರ್ಕದಿಂದ ಇವರ ರಾಷ್ವ್ರೀಯತೆ ಸ್ಪಷ್ವ ರೂಪ ಪಡೆಯಿತು. ರಾಷ್ವ್ರೀಯತೆಯ ಜಾಗ್ರತಿಗೆ ಪೋಷಕವಾಗುವ ಅನೇಕ ಹಾಡುಗಳನ್ನು ಈ ಆವಧಿಯಲ್ಲಿ ರಚಿಸಿದರು. ಈ ಹಾಡುಗಳು ಯಶಸ್ವಿಯಾದವು; ಅತ್ಯ್ಂತ ಜನಪ್ರಿಯವಾದವು. ೧೯೨೧ರಲ್ಲಿ ಈ ಹಾಡುಗಳು ರಾಷ್ವೀಯ ಪದ್ಯಮಾಲೆ ಎಂಬ ಹೆಸರಿನಿಂದ ಬೆಳಗಾವಿಯಲ್ಲಿ ಮುದ್ರಣಗೊಂಡವು. ಡಾ|| ಬೆಟಗೇರಿ ಕೃಷ್ಣಶರ್ಮರು ತಮ್ಮ ಜೀವನ ಕಾಲದಲ್ಲಿ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಪ್ರತಿಯೊಂದು ಪ್ರಕಾರದಲ್ಲಿಯ ಅವರ ಕೃತಿಗಳು ಆಯಾ ಪ್ರಕಾರದಲ್ಲಿ ಅಂದು ಮಾದರಿಯೆಂದು ಪರಿಗಣಿಸಲ್ಪಟ್ಟಿವೆ. ೧೪ ಕವನ ಸಂಕಲನ, ೭ ಸಣ್ಣ ಕಥಾ ಸಂಕಲನ, ೬ ಕಾದಂಬರಿ, ೪ ನಾಟಕ ಸಂಕಲನ, ೧ ತರಿತ್ರೆ, ಸಂಸ್ಕೃತಿ, ವಿಮರ್ಶೆ ಮತ್ತು ಸಂಶೋಧನ ಪ್ರಬಂಧಗಳ ಸಂಕಲನ ೪, ಜಾನಪದ ವಿವೇಚನೆ ೩, ಅನುವಾದ ೧ ಸಂಪಾದಿತ ಕೃತಿಗಳು ಹನ್ನೊಂದು ಮಕ್ಕಳ ಸಾಹಿತ್ಯ ಕೃತಿಗಳು ೪ ಹೀಗೆ ಒಟ್ಟಿಗೆ ೫೪ ಕೃತಿಗಳನ್ನು ಭಿಟಗೇರಿಯವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. == ಕೃತಿ ಪರಿಚಯ == 'ಆನಂದಕಂದ' ಪ್ರಕಟಿತ ಕೃತಿಗಳಲ್ಲಿ ವೈವಿಧ್ಯತೆ ಹೆಚ್ಚು, ಬೆಳವಣಿಗೆ ಸ್ಪಷ್ವ. ಪ್ರತಿಯೊಂದು ಕೃತಿಯಲ್ಲಿಯೂ ಹೊಸತನ. ಪ್ರತಿಭೆ, ಪರಿಶ್ರವಗಳಮುಪ್ಪುರಿ ಸ್ಪಷ್ವವಾಗಿ ಗೋಚರಿಸುತ್ತದೆ. ಕಾವ್ಯಗಳು: ವಿರಹಿಣಿ, ಒಡನಾಡಿ, ಅರುಣೋದಯ, ಕಾರಹುಣ್ಣಿವೆ, ನಲ್ವಾಡುಗಳು, ಉತ್ಸಾಹಗಾಥ, ಇವು ಭಾವಗೀತೆಗಳ ಸಂಕಲನಗಳು. ಸಾಮಾಜಿಕನ ಸಂವಚನಗಳು, ವಚನ ಗೀತೆಗಳ ಸಂಕಲನ. ವಚನದ ವಾದರಿಯ ರಚನೆಗಳಿಲ್ಲಿವೆ. == ಜಾನಪದ == ಬೀಸುವ ಕಲ್ಲಿನ ಹಾಡುಗಳು, ನಾಗವಂಗಲ ಜಾನಪದ ಸಮ್ಮೇಳನದ ಅಧ್ಯಕ್ಷೀಯ ಭಾಷಣ, ಕನ್ನಡ ಜಾನಪದ ಸಾಹಿತ್ಯ ಆನಂದಕಂದರು ಪ್ರಕಟಿಸಿದ ಕೃತಿಗಳು. == ಸಂಪಾದನೆ == ಡಾ|| ಬೆಟಗೇರಿಯವರು ದಾಸ ಸಾಹಿತ್ಯ ಮ್ಮತ್ತು ಬೇರೆ ಕೆಲವು ಗ್ರಂಥಗಳನ್ನು ಬಹಳ ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ- ಪಾಜಾತತ್ತ್ವ(೧೯೬೩), ಆರ್ತಭಾವ(೧೯೬೬), ಮಹಾತ್ಮ್ಯ ಜಾನ(೧೯೬೪), ಕೃಷ್ಣಲೀಲಾ(೧೮೬೫), ಲೋಕನೀತಿ(೧೯೬೬), ಸಂಕೀರ್ಣ(೧೯೬೬), ಸಂಗ್ರಹ ಎಂಬ ೬ ಸಂಪುಟಗಳಲ್ಲಿ ಪುರಂದರದಾಸರ ಸಮಗ್ರ ಸಾಹಿತ್ಯವನ್ನು ಸಂಪಾದನ ವಿಜಾನ ಪ್ರಕಾರ ಶಾಸ್ತ್ರೀಯವಾಗಿ ಸಂಪಾದಿಸಿ, ಅಭ್ಯಾಸಪೂರ್ಣ ಪ್ರಸ್ತಾವನೆ ಬರೆದು, ವಿವರಣೆ, ಅರ್ಥಕೋಶ ನೀಡಿ ದಾಸಸಾಹಿತ್ಯದ ಅಭ್ಯಾಸಿಗಳಿಗೆ ಉಪಕಾರ ಮಾಡಿದ್ದಾರೆ. == ಹಿರಿವೆ ಮತ್ತು ವೈಶಿಷ್ಚ್ == ಪ್ರತಿಯೊಂದು ಸಾಹಿತ್ಯ ಪ್ರಕಾರದಲ್ಲೂ ಇವರ ಕೃತಿಗಳು ಉನ್ನತ ಮಟ್ಟ ಕಾಯ್ದುಕೊಂಡಿವೆ. '‍ಒಡನಾಡಿ' ಮತ್ತು 'ನಲ್ ವಾಡುಗಳು' ಈ ಭಾವಗೀತಸಂಕಲನಗಳು; 'ಸುದರ್ಶನ' ಮತ್ತು 'ರಾಜ ಜೀವನ' ಕಥಾ ಸಂಗ್ರಹಗಳು; ಕರ್ನಾಟಕ ಜನಜೀವನ'ದಂಥ ಸಂಶೋಧನ ಕೃತಿ; 'ನಮ್ಮ ಸಂಸ್ಕೃತಿ ಪರಂಪರೆ' ಯಂಥ ಸಾಂಸ್ಕೃತಿಕ ಗ್ರಂಥಗಳು ಇವರ ಅಜರಾಮರಗೊಳಿಸುತ್ತವೆ; ಮತ್ತು ಸದಾಕಾಲ ಕನ್ನಡ ಸಾಹಿತ್ಯದಲ್ಲಿ ಮೀಲ್ಮಟ್ಟದಲ್ಲಿ ಉಳಿಯುತ್ತವೆ. ಡಾ|| ಬೆಟಗೇರಿಯವರು ಬರಹ ಮತ್ತು ಬದುಕುಗಳೆರಡರಲ್ಲಿಯೂ ಅಸದೃಶರಾದಂತಹವರೇ ಜನ-ವನರೂಪಿಸುವ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು. ಈ ಅಪರೂಪದ ಸಾಂಸ್ಕೃತಿಕ ರಾಯಭಾರಿಗೆ ಕರ್ನಾಟಕದ ಜನತೆ ಸದಾಕಾಲ ಋಣಿಯಾಗಬೇಕಾಗಿದೆ.