--> ಅನಂದ್ ಗುಜರಾತ್ ರಾಜ್ಯದ ಅನಂದ್ ಜಿಲ್ಲೆಯ ಆಡಳಿತ ಕೇಂದ್ರ. ಇದನ್ನು ಹಾಲಿನ ರಾಜಧಾನಿ ಎಂದೂ ಕರೆಯುತ್ತಾರೆ.ಏಕೆಂದರೆ ಇದು ಭಾರತದ ಕ್ಷೀರ ಕ್ರಾಂತಿಯ ತವರು ಪಟ್ಟಣ. ಇಲ್ಲಿ ಪ್ರಾರಂಭವಾದ ಕ್ಷೀರಕ್ರಾಂತಿ ದೇಶದೆಲ್ಲೆಡೆ ಪಸರಿರುವುದು ಈಗ ಇತಿಹಾಸ.ಪಟ್ಟಣವು ಈಗ ೨೨.೭ ಚದರ ಕಿ,ಮೀ.ವಿಸ್ತೀರ್ಣವಿದ್ದು ಸದ್ಯದಲ್ಲೇ ನಗರಪಾಲಿಕೆಯಾಗುವ ಸಂಭವವಿದೆ.ಪ್ರಸಿದ್ಧವಾದ ಅಮುಲ್ ಡೈರಿ ಇಲ್ಲಿದೆ.