ಆಪ್ಟೆರಿಕ್ಸ್ ಕೀವೀ ಎಂಬ ಹಾರಲಾಗದ ಪಕ್ಷಿಯ ವಂಶನಾಮ.ನ್ಯೂಜಿಲೆಂಡಿನ ಮೂಲನಿವಾಸಿ.ನ್ಯೂಜೀಲ್ಯಾಂಡಿನ ರಾಷ್ಟೀಯ ಲಾಂಛನ.ನ್ಯೂಜೀಲ್ಯಾಂಡಿಗರನ್ನು ಕಿವೀಸ್ ಎಂದೇ ಕರೆಯುವುದು ವಾಡಿಕೆಯಾಗಿದೆ. == ವೈಜ್ಞಾನಿಕ ಹೆಸರು == ಆಪ್ಟೆರಿಕ್ಸ್ ಆಸ್ಟ್ರಾಲಿಸ್ ಎಂಬುದು ಇದರ ವೈಜ್ಞಾನಿಕ ನಾಮ.ಇದರ ಕೂಗು ಕೀವೀ ಎಂದು ಧ್ವನಿಸುವುದರಿಂದ ಅದೇ ಹೆಸರು ಪಕ್ಷಿ ರೂಢವಾಗಿದೆ. == ಲಕ್ಷಣಗಳು == ಇದರ ರೆಕ್ಕೆ ಬಹಳ ಮೊಟಕು; ಪುಕ್ಕದ ಗರಿಗಳು ಬಿಡಿಬಿಡಿ. ಪೃಷ್ಠಭಾಗ ಬಹಳ ನಶಿಸಿರುವುದರಿಂದ ಮೊಟಕಾಗಿ ಕಾಣುತ್ತದೆ. ಕೀವೀ ಗಾತ್ರದಲ್ಲಿ ದೊಡ್ಡ ಕೋಳಿಯನ್ನು ಹೋಲುವುದು. ಇದರ ಕೊಕ್ಕು ಅತಿ ಉದ್ದವಾಗಿ ಬಾಗಿದೆ. ಕೊಕ್ಕಿನ ತುದಿಯಲ್ಲಿ ನಾಸಿಕ ರಂಧ್ರಗಳು ಇವೆ. ಈ ಪಕ್ಷಿಗಳ ಗ್ರಹಣ ಮತ್ತು ಶ್ರವಣ ಶಕ್ತಿ ಅತಿ ಚುರುಕು; ಆದರೆ ದೃಷ್ಟಿ ಸ್ವಲ್ಪ ಮಂದ. ಕಾಲುಗಳು ಬಹಳ ದಪ್ಪ; ಪ್ರತಿ ಕಾಲಿನಲ್ಲೂ ನಾಲ್ಕು ಬೆರಳುಗಳು, ಪ್ರತಿ ಬೆರಳಿನಲ್ಲಿಯೂ ಮೊನಚಾದ ಒಂದು ಉಗುರು. ನಾಲ್ಕು ಬೆರಳುಗಳಲ್ಲಿ ಒಂದು ಮಾತ್ರ ಹಿಂದಕ್ಕೆ ತಿರುಗಿದೆ. ರೇಗಿಸಿದಾಗ ಇವು ಮೈಮೇಲೆ ಬೀಳಲು ಹಿಂಜರಿಯುವುದಿಲ್ಲ. == ವಾಸ == ವಾಸ ದಟ್ಟವಾದ ಕಾಡುಗಳಲ್ಲಿ. ಇದು ನಿಶಾಚರಿ. == ಆಹಾರ == ಈ ಹಕ್ಕಿ ತನ್ನ ಉದ್ದವಾದ ಕೊಕ್ಕಿನಿಂದ ಇರುವೆ, ಗೆದ್ದಲುಹುಳು ಮತ್ತು ಎರೆಹುಳುಗಳನ್ನು ಗೂಡುಗಳಿಂದ ಎಳೆದು ತಿನ್ನುತ್ತದೆ. ಬೆಳದಿಂಗಳ ರಾತ್ರಿಯಲ್ಲಿ ಇವುಗಳ ಗರಿಗಳು ಥಳಥಳ ಹೊಳೆಯುತ್ತವೆ. ಆದ್ದರಿಂದ ಒಂದು ಕಂಪನಿಯವರು ತಾವು ತಯಾರಿಸುವ ಬೂಟ್‍ಪಾಲಿಷ್‍ಗೆ ಕೀವೀ ಪಾಲಿಷ್ ಎಂದೇ ಹೆಸರಿತ್ತಿದ್ದಾರೆ. ಈ ಜಾತಿಯ ಪಕ್ಷಿಗಳಲ್ಲಿ ಗಂಡಿಗೆ ಶಿಶ್ನವಿದೆ; ಕೀವೀ ಪಕ್ಷಿಯ ತತ್ತಿ ಬಹು ದೊಡ್ಡದು. ತಂದೆ ತಾಯಿ ಪಕ್ಷಿಗಳು ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡಿ, ಮರಿಗಳಾದ ಮೇಲೆ ಆನಂದದಿಂದ ಅವುಗಳ ಸಂಗಡ ನಲಿಯುತ್ತವೆ. == ಪ್ರಬೇಧಗಳು == ಈ ಪಕ್ಷಿಜಾತಿಯಲ್ಲಿ ಮೂರು ವಂಶಗಳು ಮಾತ್ರ ಉಳಿದಿವೆ. ಅವೆಲ್ಲ ಬಹುಮಟ್ಟಿಗೆ ಒಂದನ್ನೊಂದು ಹೋಲುತ್ತವೆ. ಅವುಗಳಲ್ಲಿ ಕೀವೀ ಎಂದು ಕರೆಯುವ ಆಪ್ಟೆರಿಕ್ಸ್ ಆಸ್ಟ್ರೀಲಿಕ್ಸ್ ಎಂಬುದೇ ದೊಡ್ಡ ಪಕ್ಷಿ. == ಉಪಯೋಗ == ಮಾಂಸಕ್ಕೆಂದು ಇವನ್ನು ಜನರು ಕೊಲ್ಲುವರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಟೆಂಪ್ಲೇಟು: " ", : , , 2007-06-14, 2016-04-20. " : ", : , : , 2009-10-03, 2016-04-20. , : . , . ( ), , 2016-06-04, 2016-04-20. "", – , : , 2008-06-08, 2016-04-20. " ", ( ), . & , , 2012-04-02, 2016-04-20. " 1080: ", 1080 , : 1080 , 2011-12-02, 2016-04-20.