ಆಯ್ಲ್ ಕ್ರೈಸ್ತ ದೇವಾಲಯದ ಸಭಾಂಗಣದಲ್ಲಿನ ಪೀಠ ಸಾಲುಗಳಲ್ಲೊಂದರ ನಡುವೆ ಉದ್ದವಾಗಿ ಅಥವಾ ಅಡ್ಡವಾಗಿ ಓಡಾಡಲು ಬಿಡುವ ಜಾಗ. ಮಂದಿರದ ಪಾಶ್ರ್ವಕ್ಕೂ ಈ ಹೆಸರಿದೆ. ಈಗ ಸಾಮಾನ್ಯವಾಗಿ ಪೀಠೋಪಕರಣಗಳ ಮಧ್ಯೆ ಓಡಾಡುವುದಕ್ಕೆ ಬಿಡುವ ಜಾಗವನ್ನು ಈ ರೀತಿಯಾಗಿ ಕರೆಯುತ್ತಾರೆ. ಇದು ಸಭಾಂಗಣ,ವಿಮಾನ, ಬಸ್ಸು,ನಾಟಕ ಗೃಹ ಇತ್ಯಾದಿ ಯಾವುದೇ ಸ್ಥಳವಾಗಿರಬಹುದು.