ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್ (ಅಕ್ಟೋಬರ್ ೧೦, ೧೯೦೬ - ಮೇ ೧೩, ೨೦೦೧) ಭಾರತದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು. ಆಂಗ್ಲ ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎಂಬ ಕಾಲ್ಪನಿಕ ದಕ್ಷಿಣ ಭಾರತದ ಸ್ಥಳದಲ್ಲಿ ನಡೆಯುತ್ತವೆ. ನಾರಾಯಣ್ ಅವರ ಮೊದಲ ಕಾದಂಬರಿ ಸ್ವಾಮಿ ಮತ್ತು ಗೆಳೆಯರು. ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನಂತರ ಇದರ ಹಸ್ತಪ್ರತಿಯನ್ನು ಬ್ರಿಟಿಷ್ ಲೇಖಕ ಗ್ರಹಾಂ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾಂ ಗ್ರೀನ್ ನಾರಾಯಣ್ ಅವರ ಜೀವನಪರ್ಯಂತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನಂತರ ನಾರಾಯಣ್ ಅನೇಕ ಕಾದಂಬರಿಗಳನ್ನು ಬರೆದರು. ಇವರು ಕೆಲ ಕಾದಂಬರಿಗಳಲ್ಲಿ ತಮ್ಮ ಜೀವನದ ಅಂಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ ದಿ ಇಂಗ್ಲಿಷ್ ಟೀಚರ್. ನಾರಾಯಣ್ ರ ಬಹುಪಾಲು ಕೃತಿಗಳು ದೈನಂದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ದಿವಂಗತ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು ಪಾರಂಪರಿಕ ಕಟ್ಟಡ ಎಂದು ಸರ್ಕಾರ ಘೋಷಿಸಿದೆ. ಖ್ಯಾತ ಆಂಗ್ಲಭಾಷಾ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಇವರ ಸಹೋದರರಾಗಿದ್ದಾರೆ. == ನಾರಾಯಣ್ ಅವರ ಮುಖ್ಯ ಕಾದಂಬರಿಗಳು == == ನಿಧನ == ಆರ್. ಕೆ. ನಾರಾಯಣ್ ಚೆನ್ನೈ ನಲ್ಲಿ ೨೦೦೧, ರ, ಮೇ ೧೩ ರಂದು ನಿಧನರಾದರು. == ಹೊರಗಿನ ಕೊಂಡಿಗಳು == ಸ್ವಾಮಿ ಮತ್ತು ಗೆಳೆಯರು - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಓದಲು ಸಿಗುವ ಕನ್ನಡಪುಸ್ತಕ ..ಆರ್.ಕೆ.ನಾರಾಯಣ್ == ಉಲ್ಲೇಖಗಳು ==