ಡಾ.ಆರ್.ಬಿ.ಚೌಧರಿ(ರಾಯಗೊಂಡಪ್ಪ ಭೀಮಪ್ಪ ಚೌಧರಿ)ಯವರು ಮಾಜಿ ಶಾಸಕರು, ಸಚಿವರು, ವೈದ್ಯರು ಹಾಗೂ ರಾಜಕೀಯ ಧುರೀಣರು. ವಿಜಯಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸರಾದ ಭೀಮಪ್ಪ ಎಲ್ಲಪ್ಪ ಚೌಧರಿಯವರ ಮಗ. == ಜನನ == ಚೌಧರಿಯವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವಣಗಾಂವ ಗ್ರಾಮದಲ್ಲಿ ಜನಿಸಿದರು. == ಶಿಕ್ಷಣ == ಚೌಧರಿಯವರು ಎಮ್.ಬಿ.ಬಿ.ಎಸ್. ಪದವಿ ಪಡೆದಿದ್ದಾರೆ. == ನಿರ್ವಹಿಸಿದ ಖಾತೆಗಳು == 1989ರಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್‌ನಿಂದ ಆಯ್ಕೆಯಾಗಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿ, ನಂತರ ಬಂಧಿಖಾನೆ ಹಾಗೂ ಗೃಹ ರಕ್ಷಕ ಸಚಿವರಾಗಿ ಕಾರ್ಯ ನಿರ್ವಹಿಸದ್ದಾರೆ. 1994ರಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್‌ನಿಂದ, 2009ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡರು. 1984ರಲ್ಲಿ ನಡೆದ 8ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಪರಾಭವಗೊಂಡರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದರು. ಕರ್ನಾಟಕ ರಾಜ್ಯ ಗಂಗಾಮತಸ್ಥ ಸಂಘದ ರಾಜ್ಯಾಧ್ಯಕ್ಷರಾಗಿದ್ದರು. == ನಿಧನ == ಡಾ.ಆರ್.ಬಿ.ಚೌಧರಿಯವರು 2ನೇ ಫೆಬ್ರುವರಿ 2012ರಲ್ಲಿ ನಿಧನರಾದರು. == ಉಲ್ಲೇಖಗಳು ==