ವೃತ್ತಿಯಲ್ಲಿ ಶಿಕ್ಷಕರಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಗುರುತಿಸಿಕೊಂಡಿದ್ದ ಆರ್. ವಿ. ಭಂಡಾರಿಯವರು ಮಕ್ಕಳ ಸಾಹಿತ್ಯ, ವಿಮರ್ಶನೆ ಮತ್ತು ಸಾಕ್ಷರತಾ ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ್ಯ ಕೊಡುಗೆ ನೀಡಿದ್ದಾರೆ. == ಜೀವನ == ೫ ಮೇ, ೧೯೩೬ರಲ್ಲಿ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಜನಿಸಿದ ಆರ್. ವಿ. ಭಂಡಾರಿಯವರು ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಂ. ಎ. ಪದವಿಗಳನ್ನುಗಳಿಸಿ, ೧೯೯೫ರಲ್ಲಿ ಮಂಗಳೂರಿನ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ವ್ಯಾಸಂಗನ್ನೂ ಪೂರೈಸಿದರು. ನಂತರ, ಶಿಕ್ಷಕರಾಗಿ ೧೯೯೪ರಲ್ಲಿ ನಿವೃತ್ತಿ ಹೊಂದಿದರು. == ಪ್ರಶಸ್ತಿ-ಪುರಸ್ಕಾರಗಳು == ವಾಜಂತ್ರಿ ಶಿಕ್ಷಕ ಪ್ರಶಸ್ತಿ ಜಿಲ್ಲಾ ಶಿಕ್ಷಕ ಪ್ರಶಸ್ತಿ - ೧೯೯೨ ರಾಜ್ಯ ಶಿಕ್ಷಕ ಕಲ್ಯಾಣ ಪ್ರಶಸ್ತಿ - ೧೯೯೪ ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ - ೧೯೯೬ 'ಸಿಸು ಸಂಗಮೇಶ ದತ್ತಿ' ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್ - ೧೯೯೭ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ೨೦೦೨ ('ಯಶವಂತನ ಯಶೋಗೀತ' ಮಕ್ಕಳ ಕಾದಂಬರಿಗೆ) ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ - ೨೦೦೫ == ಕೃತಿಗಳು == === ಕಾದಂಬರಿಗಳು === ಬೆಂಕಿಯ ಮಧ್ಯೆ - ೧೯೮೪ [೧] ಬಿರುಗಾಳಿ - ೨೦೦೧ ನೆರೆ ಹಾವಳಿ ಮತ್ತು ಗೋಡೆಗಳು - ೨೦೦೨ ತಲೆಮಾರು - ೨೦೦೪ === ಕವನ ಸಂಕಲನ === ಕಣ್ಣೇಕಟ್ಟೆ ಕಾಡೇ ಗೂಡೆ - ೧೯೭೭ ಕೊಲೆಗಾರ ಪತ್ತೆಯಾಗಲಿಲ್ಲ - ೧೯೮೧ ಹದ್ದುಗಳು - ೨೦೦೭ === ವಿಮರ್ಶೆ === ಸಮಾಜವಾದಿ ವಾಸ್ತವ - ೧೯೮೯ ವರ್ಣದಿಂದ ವರ್ಗದ ಕಡೆಗೆ - ೨೦೦೩ ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ - ೨೦೦೩ ಒಳದನಿ - ೨೦೦೫ ಸಾಹಿತ್ಯ ಮತ್ತು ಪ್ರಭುತ್ವ- ೨೦೦೫ ಕುವೆಂಪು ದೃಷ್ಠಿ-ಸೃಷ್ಠಿ === ಮಕ್ಕಳ ಸಾಹಿತ್ಯ === ಪ್ರೀತಿಯಕಾಳು (ಮಕ್ಕಳ ನಾಟಕ ಸಂಕಲನ) ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು - ೧೯೮೪ ಬೆಳಕಿನ ಕಡೆಗೆ (13 ನಾಟಕಗಳು) ಬೆಳಕು ಹಂಚಿದ ಬಾಲಕ & ನಾನೂ ಗಾಂಧಿ ಆಗ್ತೇನೆ (2 ನಾಟಕಗಳು) - ೨೦೦೪ ಬಣ್ಣದ ಹಕ್ಕಿ (2 ನಾಟಕಗಳು) - ೨೦೦೫ ಆಡು ಬಾ ಹಾಡು ಬಾ ಹೂವಿನೊಡನೆ ಮಾತುಕತೆ - ೨೦೦೭ ಯಶವಂತನ ಯಶೋಗೀತ (ಕಾದಂಬರಿ) - ೨೦೦೨ ಚಿನ್ನದ ಹುಡುಗಿ ಚಿನ್ನಮ್ಮ (ಕಿರುಕಾದಂಬರಿ) - ೨೦೦೮ ಈದ್ಗಾ ಮತ್ತು ಬೆಳಕಿನ ಕಡೆಗೆ(ನಾಟಕ) - ೨೦೦೯ ಪ್ರೀತಿಯ ಕಾಳು (ನಾಟಕ) - ೨೦೧೧ ಒಂದೇ ಗೂಡಿನ ಹಕ್ಕಿಗಳು(ನಾಟಕ) - ೨೦೧೧ === ವ್ಯಕ್ತಿಚಿತ್ರ === ನಿರಂಜನ - ೨೦೦೫ ಕಾಡಿನ ಕವಿ (ಕುವೆಂಪು) - ೨೦೦೪ ನೇತಾಜಿ ಸುಭಾಶ್ಚಂದ್ರ ಬೋಸ್ - ೨೦೦೩ === ಸಾಕ್ಷರತಾ ಸಾಹಿತ್ಯ === ಕೇವಲ ಸಹಿ - ೧೯೯೪ ಐದು ಯಕ್ಷಗಾನ ಏಕಾಂಕಗಳು - ೧೯೯೪ ಇಟ್ಟ ಹೆಜ್ಜೆ ಮುಂದಕೆ - ೨೦೦೨ ನಾನು ಪ್ರೀತಿಸುತ್ತೇನೆ === ಸಂಪಾದನೆ === ರಸರಾಜ ದೀಪರಾಧನೆ ಕಲ್ಯಾಣ ಪ್ರಸಂಗಗಳು (ಯಕ್ಷಗಾನ ಪ್ರಸಂಗ ಸಂಪುಟ) ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಪುಟ (ಸಂಪಾದಕ ಮಂಡಲಿ ಸದಸ್ಯರು) ಉಪಸಂಸ್ಕೃತಿ ಮಾಲೆ- ಕನರ್ಾಟಕ ಸಾಹಿತ್ಯ ಅಕಾಡಮಿ ಇತ್ಯಾದಿ (ಸಂಪಾದಕ ಮಂಡಲಿ ಸದಸ್ಯರು) === ಇತರೆ === ಯಾನ ಮತ್ತು ಇತರ ನಾಟಕಗಳು - ೨೦೦೧ ಮೀನ್‌ಪಳ್ದಿ (ಕಥಾ ಸಂಕಲನ) - ೨೦೦೭ ಕನ್ನಡದಲ್ಲಿ ಇಂಗ್ಲಿಷ ವ್ಯಾಕರಣ - ೨೦೦೪ == ಮರಣ == ದೀರ್ಘಕಾಲದ ಅಸ್ವಸ್ಥತೆಯ ನಂತರ ಅಕ್ಟೋಬರ್ ೨೫, ೨೦೦೮ರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರುದಿನ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಅಂತ್ಯಕ್ರಿಯೆ ನಡೆಯಿತು. [೨]