ತಮಿಳುನಾಡಿನಲ್ಲಿರುವ ವೆಲ್ಲೂರ್ ನಗರದ (ಉ. ಅ. ೧೨೦ ೫೫', ಪು.ರೇ. ೭೯೦ ೨೪'). ಚೆನ್ನೈ ನಗರದಿಂದ ನೈಋತ್ಯಕ್ಕೆ ೫೬ ಕಿಮಿ. ದೂರದಲ್ಲಿದೆ. ಜನಸಂಖ್ಯೆ ೪೫,೨೦೫ (೧೯೯೧). ಇಡೀ ವರ್ಷ ಒಣ ಹವೆ. ಮಳೆ ೭೫ ರಿಂದ ೯೦ ಸೆಂಮೀ. ಮುಖ್ಯ ಬೆಳೆ ಬತ್ತ. ಹಿಂದೆ ಔದ್ಯೋಗಿಕ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ೧೮ನೆಯ ಶತಮಾನದ ಮಧ್ಯಭಾಗದಲ್ಲಿ ಸಿಂಹಾಸನಕ್ಕಾಗಿ ಎರಡು ಗುಂಪುಗಳ ನಡುವೆ ನಡೆದ ಆಂತರಿಕ ಯುದ್ಧದಲ್ಲಿ ಒಂದು ಗುಂಪನ್ನು ಬ್ರಿಟಿಷರೂ ಇನ್ನೊಂದನ್ನು ಫ್ರೆಂಚರೂ ಬೆಂಬಲಿಸಿದರು. ೧೭೫೧ರಲ್ಲಿ ರಾಬರ್ಟ್ ಕ್ಲೈವ್ ಇದನ್ನು ಮುತ್ತಿ ವಶಪಡಿಸಿಕೊಂಡ. ೧೭೫೮ರಲ್ಲಿ ಫ್ರೆಂಚರ ವಶವಾಯಿತು. ಆದರೆ ೧೭೬೦ರಲ್ಲಿ ಬ್ರಿಟಿಷರು ಪುನಃ ಪಡೆದುಕೊಂಡರು. ೧೭೮೦ರಲ್ಲಿ ಹೈದರ್ ಅಲಿಯ ಕೈಗೆ ಬಂತು. ೧೮೦೧ರಲ್ಲಿ ಬ್ರಿಟಿಷರು ಆರ್ಕಾಟನ್ನೊಳಗೊಂಡ ಸಂಪುರ್ಣ ಕರ್ನಾಟಕವನ್ನು ವಶಪಡಿಸಿಕೊಂಡರು. == ಬಾಹ್ಯ ಸಂಪರ್ಕಗಳು == , "." Encyclopædia (2005) "." (2004) " (. )". , (2001) "." " (1902) [೧]