ಹಿಂದೆ ಯುರೋಪಿಯನ್ ರಷ್ಯಕ್ಕೆ ಸೇರಿದ್ದ, ಈಗ ಸೋವಿಯತ್ ಒಕ್ಕೂಟದ ಒಂದು ಭಾಗ. ವಿಸ್ತೀರ್ಣ ೨.೨೮.೬೧೦ ಚ.ಕಿಮೀ. ಜನಸಂಖ್ಯೆ ೩೬೬,೨೦೦ (೧೯೯೯). ವಾಯುಗುಣ ತೀಕ್ಷ್ಣ ಚಳಿಯಿಂದ ಕೂಡಿದೆ. ಗಲ್ಫ್ ಸ್ಟ್ರೀಂ ಉಷ್ಣೋದಕ ಪ್ರವಾಹ ಇದರ ಬಳಿ ಹರಿದರೂ ವರ್ಷದ ೧೯೦ ದಿವಸಗಳ ಕಾಲ ನೀರು ಗಡ್ಡೆಕಟ್ಟಿರುತ್ತದೆ. ಉತ್ತರದ ತಂಡ್ರ ವಲಯದಲ್ಲಂತೂ ಜೀವನ ಸ್ಥಗಿತಗೊಳ್ಳುತ್ತದೆ. ಉಳಿದ ತೀರ ಪ್ರದೇಶಗಳಲ್ಲಿ ಮೀನುಗಾರಿಕೆ ಮುಖ್ಯ ಉದ್ಯೋಗ. ದಕ್ಷಿಣ ಅಥವಾ ಒಳನಾಡಿನಲ್ಲಿ ಪೈನ್ ಮರಗಳ ಕಾಡುಗಳಿರುವುದರಿಂದ ಮೀನುಗಾರಿಕೆ, ಬೇಟೆ, ಅಣಬೆಗಳ ಸಂಗ್ರಹ ಮತ್ತು ನಗರಗಳಿಗೆ ರವಾನೆ ನಡೆಯುತ್ತದೆ. ಬಾರ್ಲಿ, ಚಳಿಗಾಲದ ರೈ, ಓಟ್ಸ್, ಅಗಸೆಗಳನ್ನು ದಕ್ಷಿಣ ಭಾಗಗಳಲ್ಲಿ ಬೆಳೆಯುತ್ತಾರೆ. ೬೫ಲಿ ಉತ್ತರ ಅಕ್ಷಾಂಶದ ದಕ್ಷಿಣಕ್ಕೆ ಆಲೂಗಡ್ಡೆ ಬೆಳೆಯುತ್ತಾರೆ. ಕಾಡುಗಳಿಂದ ಮರದ ದಿಮ್ಮಿ ಟಾರ್ಗಳನ್ನು ಪಡೆಯಲಾಗುವುದು. ತೀರಪ್ರದೇಶಗಳಲ್ಲಿ ಹಡಗುನಿರ್ಮಾಣ ಕೇಂದ್ರಗಳಿವೆ. ನ್ಯಾಫ್ತ, ಉಪ್ಪುಗಳು, ಪಿನೆಗ ಪ್ರದೇಶದಲ್ಲೂ ಮೈಕ ಮತ್ತು ಲಿಗ್ನೈಟ್ಗಳನ್ನು ಮೆಜೆನ್ನಲ್ಲೂ ಗಂಧಕದ ಚಿಲುಮೆಗಳಿಂದ ಗಂಧಕವನ್ನೂ ಷೆನ್ ಕುರಸ್ಕ್ ಮತ್ತು ಖೊಲ್ಮೊಗೊರಿಯಲ್ಲೂ ತಯಾರಿಸುತ್ತಾರೆ. ರಷ್ಯನ್ನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರು ನೆನ್ಸೆ, ಲ್ಯಾಪ್, ಕಾರೇಲಿಯನ್ ಇತ್ಯಾದಿ ಆದಿ ಜನಾಂಗದವರೊಂದಿಗೆ ಸೇರಿಹೋಗಿದ್ದಾರೆ. ಈ ಪ್ರಾಂತ್ಯದ ರಾಜಧಾನಿ, ಬಂದರು, ಮಹಾನಗರವಾಗಿರುವ ಆರ್ಕೇಂಜಲ್ ಉತ್ತರ ಡ್ವಿನಾದ ಮುಖಜಭೂಮಿಯ ಬಳಿಯ ಬಲದಂಡೆಯ ಮೇಲೆ ೬೪೦ ೩೩' ಉ.ಅ. ಮತ್ತು ೪೦೦ ೩೩' ಪು.ರೇ. ದಲ್ಲಿದೆ. ೧೫೫೩ರಲ್ಲಿ ರಿಚರ್ಡ್ ಛಾನ್ಸಲರ್ ಎಂಬ ಇಂಗ್ಲಿಷ್ ನಾವಿಕ ಇದನ್ನು ನಿರ್ಮಿಸಿದ. ಅನೇಕ ವರ್ಷಗಳವರೆಗೆ ಮಸ್ಕೋವಿಯ ನೇರ ಬಂದರಾಗಿತ್ತು. ಲೆನಿನ್ಗ್ರಾಡ್ ಬಂದರಾದ ಮೇಲೆ ಈ ನಗರದ ಪ್ರಾಮುಖ್ಯ ಕುಗ್ಗಿತು. ಇಲ್ಲಿನ ಅತ್ಯಂತ ಕಿರುದಿನ ೩ ಗಂ. ೧೨ ನಿಮಿಷ ಮತ್ತು ವಿಸ್ತೃತದಿನ ೨೧ ಗಂ. ೪೮ನಿಮಿಷ. ನವೆಂಬರ್ನಿಂದ ಮೇವರೆಗೆ ನದೀ ಮುಖಜ ಭೂಮಿ ಹಿಮಾಚ್ಛಾದಿತವಾಗಿರುತ್ತದೆ. ಹಿಮಭಂಜಕಯಂತ್ರಗಳಿಂದ ವರ್ಷಪುರ್ತಿ ವ್ಯಾಪಾರ ಸಾಧ್ಯ. ನದಿ, ರೈಲು ಮತ್ತು ಕಾಲುವೆಗಳ ಮುಖಾಂತರ ದಕ್ಷಿಣ ಭಾಗಗಳನ್ನು ಸೇರಿಸಲಾಗಿದೆ. ಮುಖ್ಯ ರಫ್ತು ಮರದ ದಿಮ್ಮಿ, ಟಾರ್, ಅಗಸೆನಾರು, ಚರ್ಮ, ಮರಕೊಯ್ಯುವಿಕೆ, ಮೀನಿನೆಣ್ಣೆ, ಸೆಲ್ಯುಲೋಸ್, ಚರ್ಮತಯಾರಿಕೆ ಇಲ್ಲಿನ ಕೈಗಾರಿಕೆಗಳು. ಇಲ್ಲಿ ಒಂದು ನಾವಿಕಶಾಲೆ ಇದೆ. == ಉಲ್ಲೇಖಗಳು ==