ಆರ್ಗಾನ್ ಒಂದು ಶ್ರೇಷ್ಠಾನಿಲ ಮೂಲಧಾತು. ಇದು ಬಣ್ಣ, ವಾಸನೆ, ರುಚಿ ಇಲ್ಲದ ಅನಿಲ. ಇದು ಭೂ ವಾತಾವರಣದ ಶೇಕಡಾ ೦.೯೪ ರಷ್ಟಿದೆ. ಇದು ಒಂದು ಜಡ ಅನಿಲ. ಇದನ್ನು ಲಾರ್ಡ್ ರೇಲೆ( ) ಹಾಗೂ ವಿಲಿಯಮ್ ರಾಮ್ಸೆಯವರು ೧೮೯೪ರಲ್ಲಿ ಕಂಡುಹಿಡಿದರು. ಇದನ್ನು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ವಿರಳ ಅನಿಲಗಳಲ್ಲಿ (ಅಥವಾ ನಿಷ್ಕ್ರಿಯ ಅನಿಲಗಳು, ಇನರ್ಟ್ ಗ್ಯಾಸಸ್) ಒಂದು. ರಾಸಾಯನಿಕ ಚಿಹ್ನೆ ; ಪರಮಾಣು ಸಂಖ್ಯೆ ೧೮; ಪರಮಾಣು ತೂಕ ೩೯.೯೪೪. ಇದನ್ನು ಸಾಮಾನ್ಯವಾಗಿ ದ್ರವಗಾಳಿಯ ಆಂಶಿಕಬಟ್ಟಿ ಇಳಿಸುವ ಮೂಲಕ ಪಡೆಯುತ್ತಾರೆ. ಇದನ್ನು ಆವರ್ತಕೋಷ್ಟಕದ ಸೊನ್ನೆಗುಂಪಿನಲ್ಲಿ (ಜಿರೊ ಗ್ರೂಪ್) ಸೇರಿಸಲಾಗಿದೆ. ಇದರ ಸಾಂದ್ರತೆ ೧೯.೯೫. ವಿರಳಾನಿಲಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಇದನ್ನು ಇತರ ಅನಿಲಗಳೊಡನೆ ಬೆರಸಿ ಜಾಹೀರಾತು ದೀಪಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ( ) – : ?