ಆಲ ( )ಇದು ಭಾರತದ ರಾಷ್ಟ್ರವೃಕ್ಷ.ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾ(ಹಿಂದುವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ.ಎಲ್ಲೆಡೆ ಸಾಲುಮರಗಳಾಗಿ ಬೆಳೆಸಲಾಗಿದೆ.ಜಗತ್ತಿನ ಅತ್ಯಂತ ದೊಡ್ಡದಾದ ಮರ ಕಲ್ಕತ್ತಾದಲ್ಲಿದೆ. == ಸಸ್ಯ ಶಾಸ್ತ್ರೀಯ ವರ್ಗೀಕರಣ == ಇದು ಮೊರಾಸಿಯೆ ಕುಟುಂಬಕ್ಕೆ ಸೇರಿದ್ದು,ಫೈಕಸ್ ಬೆಂಗಾಲೆನಿಸಿಸ್( )ಎಂದು ಸಸ್ಯ ಶಾಸ್ತ್ರೀಯ ಹೆಸರು.ಸಂಸ್ಕೃತದಲ್ಲಿ 'ವಟವೃಕ್ಷ 'ಎಂದು ಕರೆಯುತ್ತಾರೆ. == ಸಸ್ಯದ ಗುಣ ಲಕ್ಷಣಗಳು == ಇದು ವಿಶಾಲ ಕೊಂಬೆಗಳಿಂದ ಕೂಡಿದ ಮರ.ಈ ಕೊಂಬೆಗಳಿಂದ ಬೀಳಲುಗಳು ಹೊರಟು ನೆಲವನ್ನು ತಾಗಿ ಕಾಂಡಗಳಾಗಿ ಪರಿವರ್ತಿಸುತ್ತವೆ.ಈ ರೀತಿಯಿಂದ ಹಲವು ಎಕರೆ ಪ್ರದೇಶಗಳನ್ನೂ ವ್ಯಾಪಿಸುವುದುಂಟು.ಎಲೆ ದಪ್ಪವಾಗಿದ್ದು,ತೊಗಲಿನಂತಿದ್ದು ಹೊಳಪಿನಿಂದ ಕೂಡಿದೆ. == ಉಪಯೋಗಗಳು == ಇದು ಸಾಲುಮರವಾಗಿ ವ್ಯಾಪಕವಾಗಿ ಉಪಯೋಗದಲ್ಲಿದೆ.ನೆರಳಿಗಾಗಿ,ಉದ್ಯಾನವನಗಳಲ್ಲಿ ಅಲಂಕಾರಕ್ಕೆ ನೆಡುತ್ತಾರೆ.ಇದರ ಎಲೆಗಳು ಆನೆಗಳಿಗೆ ಮೇವಾಗಿ ಉಪಯೋಗವಾಗುತ್ತದೆ.ಇದರ ಸಸ್ಯಕ್ಷೀರ ಹಾಗೂ ಬೇರಿನಿಂದ ಔಷಧ ತಯಾರಿಸುತ್ತಾರೆ. == ಆಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ