ಆಲಿಂಗನ ಎಂದರೆ ತಬ್ಬುವಿಕೆ. ಪ್ರೀತಿ, ವಿಶ್ವಾಸ, ಸ್ನೇಹಸೂಚಕವಾಗಿ ವ್ಯಕ್ತಿಯನ್ನು ವ್ಯಕ್ತಿ ಎರಡೂ ಕೈಗಳಿಂದ ತಬ್ಬಿ ಎದೆಗೆ ಎದೆ ಕೂಡಿಸುವುದು. == ಮುಸ್ಲಿಂ ಧರ್ಮದಲ್ಲಿ == ಮುಸ್ಲಿಮರಲ್ಲಿ ಸರ್ವಸಾಧಾರಣವಾದ ಆಚಾರ. == ಹಿಂದೂ ಧರ್ಮದಲ್ಲಿ == ಹಿಂದೂಗಳಲ್ಲೂ ಮದುವೆ ಸಂದರ್ಭದಲ್ಲಿ ಬೀಗರು ಬೀಗರನ್ನು ಆಲಿಂಗಿಸುವ ಪದ್ಧತಿ ಇದೆ.ಸಾಯುಜ್ಯಮೋಕ್ಷವನ್ನು ಪಡೆದ ಭಕ್ತರಿಗೆ ಪರಮಾತ್ಮನ ಆಲಿಂಗನಸುಖ ಲಭಿಸುತ್ತದೆಂದು ವಿಶಿಷ್ಟಾದ್ವೈತದಲ್ಲಿ ಹೇಳಿದೆ. == ಪ್ರೀತಿಯಲ್ಲಿ == ಸತಿಪತಿಯರಲ್ಲಿ ಚುಂಬನ, ಆಲಿಂಗನಗಳು ರತಿಭಾವಕ್ಕೆ ಆಲಂಬನಗಳಾಗಿವೆ. ಮುಖ್ಯವಾಗಿ ಆಲಿಂಗನ ಎರಡು ಮನಸ್ಸುಗಳ ಮಧುರಮಿಲನದ ಬಾಹ್ಯಪ್ರಕಟನೆಯಾಗಿದೆ. == ಇತರ == ಆಲಿಂಗನದ ನೆಪದಲ್ಲಿ ಶಿವಾಜಿ ಅಫ್ಜಲ್ ಖಾನನನ್ನು ವ್ಯಾಘ್ರನಖದಿಂದ ಬಗಿದು ಕೊಂದುದೂ ಧೃತರಾಷ್ಟ್ರಾಲಿಂಗನಕ್ಕೆ ಸಿಕ್ಕ ಭೀಮನ ಲೋಹ ಪ್ರತಿಮೆ ನುಚ್ಚುನುರಿಯಾಗಿ ಹೋದುದೂ ಆಲಿಂಗನದ ಇನ್ನೊಂದು ಮುಖಕ್ಕೆ ಉದಾಹರಣೆಗಳಾಗಿವೆ.