ಆಳ್ವಿಕೆ ಎಂದರೆ ಒಂದು ರಾಷ್ಟ್ರದ (ಉದಾ. ಸೌದಿ ಅರೇಬಿಯಾ, ಬೆಲ್ಜಿಯಮ್), ಅಥವಾ ಜನರ (ಫ಼್ರ್ಯಾಂಕ್ಸ್, ಜ಼ೂಲೂಗಳು) ರಾಜನಾಗಿ/ರಾಣಿಯಾಗಿ ಅಧಿಕಾರದಲ್ಲಿ ಒಬ್ಬ ವ್ಯಕ್ತಿಯ ಅಥವಾ ರಾಜವಂಶದ ಸುಪರ್ದಿನ ಅವಧಿ. ಬಹುತೇಕ ಆನುವಂಶಿಕ ರಾಜಪ್ರಭುತ್ವಗಳಲ್ಲಿ ಮತ್ತು ಕೆಲವು ಚುನಾಯಿತ ರಾಜಪ್ರಭುತ್ವಗಳಲ್ಲಿ ಸಾರ್ವಭೌಮನ ಆಳ್ವಿಕೆಯ ಅಥವಾ ಸ್ಥಾನಿಕತ್ವದ ಅವಧಿಯ ಯಾವುದೇ ಮಿತಿಗಳಿಲ್ಲ, ಅಥವಾ ಅಧಿಕಾರಾವಧಿ ಇಲ್ಲ. ಹಾಗಾಗಿ, ಆಳ್ವಿಕೆಯು ಸಾಮಾನ್ಯವಾಗಿ ರಾಜನು/ರಾಣಿಯು ಮರಣ ಹೊಂದುವವರೆಗೆ ಇರುತ್ತದೆ. ಇದಕ್ಕೆ ಅಪವಾದವೆಂದರೆರಾಜಪ್ರಭುತ್ವವು ರದ್ದುಗೊಂಡಾಗ ಅಥವಾ ರಾಜನು/ರಾಣಿಯು ಸ್ಥಾನವನ್ನು ತೊರೆದರೆ ಅಥವಾ ಆ ಸ್ಥಾನದಿಂದ ಪದಚ್ಯುತಗೊಂಡ ಸಂದರ್ಭದಲ್ಲಿ. ಚುನಾಯಿತ ರಾಜಪ್ರಭುತ್ವಗಳಲ್ಲಿ, ಅಧಿಕಾರದಲ್ಲಿ ರಾಜನ/ರಾಣಿಯ ನಿಗದಿತ ಕಾಲಾವಧಿ ಇರಬಹುದು (ಉದಾ., ಮಲೇಷ್ಯಾ). ಗಮನಾರ್ಹ ಆಳ್ವಿಕೆಗಳಲ್ಲಿ ಈ ಮುಂದಿನವು ಸೇರಿವೆ. ರಾಣಿ ವಿಕ್ಟೋರಿಯಾ ೧೮೩೭ರಿಂದ ೧೯೦೧ರ ವರೆಗೆ ಆಳ್ವಿಕೆ ನಡೆಸಿದಳು. ಥೈಲಂಡ್‍ನ ರಾಜ ಭೂಮಿಬೋಲ್ ಅದುಲ್ಯದೇಜ್ ೧೯೪೬ರಿಂದ ೨೦೧೬ರ ವರೆಗೆ ಆಳ್ವಿಕೆ ನಡೆಸಿದನು. ಕಾಮನ್‍ವೆಲ್ತ್ ರಾಷ್ಟ್ರಗಳ ರಾಣಿ ಎರಡನೇ ಎಲಿಜಬೆಥ್ ೧೯೫೨ರಿಂದ ಇಂದಿನವರೆಗೆ ಆಳ್ವಿಕೆ ನಡೆಸುತ್ತಿದ್ದಾಳೆ. ಜಪಾನ್‍ನ ಸಾಮ್ರಾಟ ಅಕಿಹಿಟೊ ೧೯೮೯ರಿಂದ ಇಂದಿನವರೆಗೆ ಆಳ್ವಿಕೆ ನಡೆಸುತ್ತಿದ್ದಾನೆ. ಗುಪ್ತ ಸಾಮ್ರಾಜ್ಯದ ಚಂದ್ರಗುಪ್ತ ವಿಕ್ರಮಾದಿತ್ಯನು ಕ್ರಿ.ಶ ೩೭೫ರಿಂದ ಕ್ರಿ.ಶ. ೪೧೫ರ ವರೆಗೆ ಆಳ್ವಿಕೆ ನಡೆಸಿದನು ಆಳ್ವಿಕೆಯು ಮೂರು ರೀತಿಗಳಿಂದ ಅಂತ್ಯವಾಗಬಹುದು: ಮರಣ, ಪದತ್ಯಾಗ, ಅಥವಾ ಅಧಿಕಾರದಿಂದ ಪದಚ್ಯುತಿ. == ಉಲ್ಲೇಖಗಳು ==