ಆಸ್ವಾನ್ ಈಜಿಪ್ಟ್ ದೇಶದ ಆಸ್ವಾನ್ ಪ್ರಾಂತ್ಯದ ಮುಖ್ಯಪಟ್ಟಣ. ಉತ್ತರದ ಕೈರೋವಿನಿಂದ ಇಲ್ಲಿಗೆ ರೈಲುಮಾರ್ಗದ ಮೇಲೆ ಐನೂರೈವತ್ತು ಮೈಲಿ (893 ಕಿ.ಮೀ.), ನೈಲ್ ನದಿಯ ಪೂರ್ವದಂಡೆಯ ಮೇಲಿರುವ ಈ ಪಟ್ಟಣವಿದೆ. == ಜನಸಂಖ್ಯೆ == ಇಲ್ಲಿಯ ಜನಸಂಖ್ಯೆ ೨,೯೦,೩೨೭ (೨೦೧೨), ಸರಹದ್ದಿನ ಅಯಕಟ್ಟಿನ ಸ್ಥಳವಾದ್ದರಿಂದ ಇತಿಹಾಸ ಪ್ರಸಿದ್ಧ, ಗಡಿಸೇನೆಯ ಠಾಣೆ, ನೆರೆಯ ಸುಡಾನ್, ಅಬಿಸೀನಿಯಗಳೊಂದಿಗೆ ವ್ಯಾಪಾರಕ್ಕೆ ಮುಖ್ಯದ್ವಾರ. == ಸಂಪರ್ಕ == ಆಸ್ವಾನಿನ ದಕ್ಷಣಕ್ಕೆ ಕೆಲವು ಮೈಲಿಗಳ ದೂರದಲ್ಲಿರುವ ಜಲಪಾತದ ತಲೆಯ ಬಳಿ ಇರುವ ಷೆಲ್ಲಾಲ್‍ವರೆಗೂ ರೈಲುಮಾರ್ಗ ಮುಂದುವರಿಯುತ್ತದೆ. ಅಲ್ಲಿಂದಾಚೆಗೆ ಸೂಡಾನಿನೊಂದಿಗೆ ಜಲಮಾರ್ಗ ಸಂಪರ್ಕ, ಪೂರ್ವಕ್ಕೆ ಮೂವತ್ತು ಮೈಲಿ ದೂರದಲ್ಲಿ ದೊರಕುವ ಕಬ್ಬಿಣದ ಅದುರು ಕೈರೋ ವಿಭಾಗದ ಕಬ್ಬಿಣ ಉಕ್ಕಿನ ಕಾರ್ಖಾನೆಗೆ ಸಾಗುತ್ತದೆ. == ವಾಣಿಜ್ಯ == ಆಸ್ವಾನ್ ಒಂದು ಆರೋಗ್ಯಧಾಮ, ಪ್ರವಾಸಿಕೇಂದ್ರ; ಆಫ್ರಿಕದಲ್ಲೇ ಸುಂದರವಾದ ನಗರ. ನಗರದ ಎದುರಿಗಿರುವ ಎಲಿಫಾಂಟೈನ್ ನಡುಗಡ್ಡೆಯ ಮೇಲೆ ಬಲು ಹಿಂದೆಯೇ ಜನ ವಾಸಿಸಲಾರಂಭಿಸಿದರು. ನೈಲ್ ನದಿಯ ಪ್ರವಾಹವನ್ನಳೆಯಲು ಆಗ ನಿಲ್ಲಿಸಿದ ಸ್ತಂಭವೊಂದು ಈಗಲೂ ಉಂಟು. ಮುಂದೆ ನಗರ ಬೆಳೆಯಿತು. ಪುರಾತನ ಈಜಿಪ್ಟಿನ ದೇವಮಂದಿರಗಳನ್ನು ಕಟ್ಟಲು ಬೇಕಾದ ಕಲ್ಲುಗಳನ್ನು ಸಮೀಪದ ಬಂಡೆಗಳಿಂದ ಎಬ್ಬಿ ತೆಗೆಯಲಾರಂಬಿಸಿದ ಮೇಲೆ ನಗರದ ಪ್ರಾಮುಖ್ಯ ಹೆಚ್ಚಿತು. == ಹವಾಮಾನ == ಇಲ್ಲಿಯ ಹವಾಮಾನ ಮರುಭೂಮಿಯ ಒಣ ಹವೆಯಿದ್ದು ಮಳೆ ಬಹು ಅಪರೂಪವಾಗಿದೆ.ಚಳಿಗಾಲವು ಹಿತಕರವಾಗಿದ್ದು, ಬೇಸಗೆಯ ಸಹಿಸಲಸಾದ್ಯವಾಗಿರುತ್ತದೆ. == ಆಣೆಕಟ್ಟುಗಳು == ನೈಲ್ ನದಿಯ ಪಶ್ಚಿಮಕ್ಕಿರುವ ಕಡಿದಾದ ದಂಡೆಯ ಮೇಲೆ ಬಂಡೆಗಳಲ್ಲೇ ಕೊರೆದ ಅನೇಕ ಗೋರಿಗಳಿವೆ. ನಗರದ ಬಳಿಯಲ್ಲೇ ಆಸ್ವಾನ್ ಆಣೆಕಟ್ಟೆಯಿದೆ. == ಛಾಯಾಂಕಣ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2011-07-07 ವೇಬ್ಯಾಕ್ ಮೆಷಿನ್ ನಲ್ಲಿ.