ಇಂಡಿಗೋ ಎರಡು ಇಂಡೋಲ್ ಆವರ್ತಗಳ ಸಂಯೋಜನೆಯಿಂದ ಉತ್ಪತ್ತಿಯಾಗುವ ವಸ್ತು. ಅಣುಸೂತ್ರ C16H10N2O2. ಇಂಡಿಗೋ ಪದದ ಕನ್ನಡರೂಪ ನೀಲಿ. ಸಾಮಾನ್ಯವಾಗಿ ಇದರ ಉಪಯೋಗ ಬಟ್ಟೆಯ ಚೆಲುವೆಗೆ. ಈ ಪದಾರ್ಥ ಇಂಡಿಕಾನ ಎಂಬ ವಸ್ತುವಿನ ರೂಪದಲ್ಲಿ, ಇಂಡಿಗೋಫೆರ ಟಿಂಕ್ಟೋರಿಯ ಎಂಬ ಜಾತಿಗೆ ಸೇರಿದ ಸಸ್ಯಗಳಲ್ಲಿ ಉತ್ಪತ್ತಿಯಾಗುತ್ತದೆ. ಕೃತಕವಾಗಿ ಇಂಡಿಗೋವನ್ನು ತಯಾರು ಮಾಡುವುದಕ್ಕೆ ಮೊದಲು ಭಾರತದಲ್ಲಿ ಈ ಗಿಡವನ್ನು ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. == ಗುಣಗಳು == ಅಪ್ಪಟ ನೀಲಿ ಬಣ್ಣದ ಹರಳಿನ ರೂಪದಲ್ಲಿರುವ ವಸ್ತು. 300° ಸೆ. ನಲ್ಲಿ ನೇರವಾಗಿ ಆವಿಯಾಗುತ್ತದೆ (ಎಂದರೆ ದ್ರವಿಸುವುದಿಲ್ಲ) ಮತ್ತು ಛಿದ್ರವಾಗುತ್ತದೆ. ನೀರು, ಈಥರ್ ಮತ್ತು ಮದ್ಯಸಾರದಲ್ಲಿ ವಿಲೀನವಾಗುವುದಿಲ್ಲ. ಆದರೆ ಅನಿಲಿನ್, ನೈಟ್ರೋಬೆಂಜೀನ್, ಕ್ಲೋರೋಫಾರ್ಮ್, ಪ್ರಬಲ ಅಸಿಟಿಕ್ ಮತ್ತು ಸಲ್ಪ್ಯೂರಿಕ್ ಆಮ್ಲಗಳಲ್ಲಿ ವಿಲೀನವಾಗುತ್ತದೆ. == ಉತ್ಪತ್ತಿ, ತಯಾರಿಕೆ == ಇಂಡಿಗೋಫೆರ ಸಸ್ಯಗಳ ಸಣ್ಣ ಸಣ್ಣ ರಂಬೆಗಳು ಮತ್ತು ಎಲೆಗಳನ್ನು ನೀರಿನೊಂದಿಗೆ ಹುದುಗಿಸಿದಾಗ ಇಂಡಿಕಾನ್ ವಿಭಜನೆಯಾಗುತ್ತದೆ. ಫಲಿತವನ್ನು ಗಾಳಿಯಲ್ಲಿ ಉತ್ಕರ್ಷಿಸಿದಾಗ ಇಂಡಿಗೋ ಒತ್ತರದ ರೂಪದಲ್ಲಿ ಹೋರಬೀಳುತ್ತದೆ. ಈ ವಿಧಾನ ಈಗ ಬಳಕೆಯಲ್ಲಿಲ್ಲ. ಕೃತಕವಾಗಿ ಇಂಡಿಗೋವನ್ನು; ಅನಿಲಿನ್ ಮತ್ತು ಕ್ಲೋರಲಿಸಿಟಿಕ್ ಆಮ್ಲಗಳನ್ನು (ClCH2.) ಸಂಯೋಗ ಮಾಡುವುದರಿಂದ ಉತ್ಪತ್ತಿಯಾಗುವ ಫೀನೈಲ್ ಗ್ಲೈಸಿನ್ ವಸ್ತುವನ್ನು ಪ್ರತ್ಯಾಮ್ಲ ಮತ್ತು ಸೋಡಿಯಂ ಅಮೈಡ್‍ಗಳೊಂದಿಗೆ ಬೆಸೆದು ಉತ್ಪತ್ತಿಮಾಡುತ್ತಾರೆ. ಕೃತಕವಾಗಿ ಉತ್ಪತ್ತಿಯಾಗುವ ಇಂಡಿಗೋ ವಾಸ್ತವ ಮೂಲಗಳಿಂದ ತಯಾರುಮಾಡುವ ವಸ್ತುವಿಗಿಂತ ಉತ್ತಮವಾಗಿರುವುದೆಂದು ಪರಿಗಣಿಸಲಾಗಿದೆ. == ಉಪಯೋಗಗಳು == ಹತ್ತಿಯ ಬಟ್ಟೆಗಳಿಗೆ ಬಣ್ಣವನ್ನು ಕೊಡುವುದಕ್ಕೆ; ಶಾಯಿಗಳ ತಯಾರಿಕೆಯಲ್ಲಿ; ಇಂಡಿಗೋದಿಂದ ಉತ್ಪತ್ತಿಯಾಗುವ ವಸ್ತುಗಳ ತಯಾರಿಕೆಯಲ್ಲಿ, ಬಣ್ಣಗಳ ತಯಾರಿಕೆಯಲ್ಲಿ. == ಹೆಚ್ಚಿನ ಓದಿಗೆ == -, (2016). : . : . . 264 . 978-0-7141-1776-8. , ...; . .; .; . (2004). " " (). . 33 (6): 329–36. :10.1039/b305697j. 15280965. -, (1981). " " (). . 58 (4): 301. :1981JChEd..58..301S. :10.1021/ed058p301. == ಬಾಹ್ಯ ಸಂಪರ್ಕಗಳು == : , &