ಇಂದ್ರಿಯಗಳು ಜೀವಿಗಳಿಗೆ ಹೊರಗಿನ ಪ್ರಪಂಚದ ಬಗ್ಗೆ ಮಾಹಿತಿಯನ್ನು ನೀಡುವ ಅಂಗಗಳು. ಸಸ್ತನಿಗಳಲ್ಲಿ ಪ್ರಮುಖವಾಗಿ ಐದು ಇಂದ್ರಿಯಗಳನ್ನು ಗುರುತಿಸಲಾಗುತ್ತದೆ. ಅವು: ಕಣ್ಣು - ದೃಷ್ಟಿ ಮಾಹಿತಿಗೆ. ಕಿವಿ - ಶಬ್ದ ಮಾಹಿತಿಗೆ. ನಾಲಿಗೆ - ರುಚಿ ಮಾಹಿತಿಗೆ. ಮೂಗು - ವಾಸನೆ ಮಾಹಿತಿಗೆ. ಚರ್ಮ - ಸ್ಪರ್ಶ ಮಾಹಿತಿಗೆ.