ಇಟಾ ನಗರಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿ.ಇದು ಹಿಮಾಲಯದ ತಪ್ಪಲಲ್ಲಿದೆ.ಆಡಳಿತಾತ್ಮಕವಾಗಿ ಇದು ಪಪಂ ಪಾರೆ ಜಿಲ್ಲೆಯಲ್ಲಿದೆ. == ಭೌಗೋಳಿಕ == ಇದು ಸಮುದ್ರ ಮಟ್ಟದಿಂದ ಸುಮಾರು ೭೫೦ ಮೀಟರ್ ಎತ್ತರ ಪ್ರದೇಶದಲ್ಲಿದೆ. ಇಲ್ಲಿಯ ಆಕ್ಷಾಂಶ ರೇಖಾಂಶವು 27.1° 93.62°﻿ / 27.1; 93.62. == ಹವಾಮಾನ == ಇಲ್ಲಿ ತೇವಭರಿತ ಸಮಶೀತೋಷ್ಣ ಹವಾಮಾನವಿದ್ದು,ಶುಷ್ಕ,ಸಾಧಾರಣ ಚಳಿಗಾಲ ಮತ್ತು ಬೆಚ್ಚನೆಯ ಬೇಸಗೆ ಇದೆ. == ಜನ ಸಂಖ್ಯೆ == ಇಟಾ ನಗರದ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೩೪,೯೭೦. ೫೩% ಪುರುಷರು,೪೭% ಮಹಿಳೆಯರು.ಸಾಕ್ಷರತೆ ೬೬.೯% == ಜನ == ಇಟಾ ನಗರದಲ್ಲಿ ಮುಖ್ಯವಾಗಿ ಹಲವಾರು ಬುಡಕಟ್ಟು ಜನರ ಮಿಶ್ರಣ ಜನಸಂಖ್ಯೆ ಇದೆ.ಬೌದ್ಧ ಧರ್ಮದ ಪ್ರಭಾವ ಸಾಕಷ್ಟಿದ್ದು ಸುಂದರವಾದ ಬೌದ್ಧ ಮಂದಿರವಿದೆ. == ಸಂಪರ್ಕ == ಇಟಾ ನಗರಕ್ಕೆ ಗುವಾಹಟಿಯಿಂದ ಹೆಲಿಕಾಪ್ಟರ್ ಸಂಪರ್ಕವಿದೆ.ಬಸ್ಸು ಮತ್ತು ರೈಲ್ವೇ ಸಂಪರ್ಕವೂ ಉತ್ತಮವಾಗಿದೆ. == ಪ್ರವಾಸೋದ್ಯಮ == ಇಟಾ ನಗರದಲ್ಲಿ ಒಂದು ಸುಂದರ ಕೋಟೆ ಇದೆ.ಇದಲ್ಲದೆ ಹೊಸತಾಗಿ ನಿರ್ಮಾಣವಾದ ಬೌದ್ಧ ಮಂದಿರ,ಜವಾಹರಲಾಲ್ ವಸ್ತು ಸಂಗ್ರಹಾಲಯ,ಗಂಗಾ ಸರೋವರ ಪ್ರೇಕ್ಷಣೀಯ ಸ್ಥಳಗಳಲ್ಲಿ ಸೇರಿದೆ. == ವಾಣಿಜ್ಯ == ಕೃಷಿ ಇಲ್ಲಿಯ ಪ್ರಧಾನ ಉದ್ಯೋಗ. == ಭೌಗೋಳಿಕ ನಿವೇಶನ == == ಉಲ್ಲೇಖಗಳು ==