ಬಿಳಿ ಉಪ್ಪಿಗಿಡದ ಜಾತಿಯ ಸಸ್ಯ (ಅಝೀಮ); ಕುಂಡಲಿ ಗಿಡ ಪರ್ಯಾಯನಾಮ. ಮೈತುಂಬ ಮುಳ್ಳಿನಿಂದ ಕೂಡಿರುವ ಪೊದರು. ಬೇಲಿಯ ಗಿಡವಾಗಿ ಬೆಳೆಸುವುದಿದೆ.ಇಸಗಲೆ ಗಿಡದಲ್ಲಿ ಗಂಡು ಹೂ ಹೆಣ್ಣು ಹೂ ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ. ಹೆಣ್ಣುಗಿಡದಲ್ಲಿ ಬಿಳಿ ಬಣ್ಣದ ಹಣ್ಣುಗಳಿರುತ್ತವೆ. == ಜಾತಿಗಳು == ಈ ಜಾತಿಯಲ್ಲಿ ಮೂರು ಪ್ರಭೇದಗಳಿವೆ. ಉಷ್ಣವಲಯದ ಆಫ್ರಿಕ ಮತ್ತು ಏಷ್ಯಖಂಡಗಳಲ್ಲಿ == ಭಾರತದಲ್ಲಿ ಇಸಗಲೆ ಗಿಡಗಳು == ಭಾರತದ ಅಝಿಮ ಟೆಟ್ರಸ್ಕಾಂತ ಎಂಬ ಪ್ರಭೇದ ದಖನ್ ಪ್ರಸ್ಥಭೂಮಿಯಲ್ಲೂ ತೀರಪ್ರದೇಶಗಳಲ್ಲೂ ಬರಡು ಜಿಲ್ಲೆಗಳಲ್ಲೂ ಬೆಳೆಯುವುದು. ಒರಿಸ್ಸ ಮತ್ತು ಬಂಗಾಳದ ಸುಂದರಬನ್‍ದಲ್ಲಿಯೂ ಕಂಡುಬರುತ್ತದೆ. ಇಸಗಲೆ ಗಿಡದಲ್ಲಿ ಗಂಡು ಹೂ ಹೆಣ್ಣು ಹೂ ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ. ಹೆಣ್ಣುಗಿಡದಲ್ಲಿ ಬಿಳಿ ಬಣ್ಣದ ಹಣ್ಣುಗಳಿರುತ್ತವೆ. == ಉಪಯೊಗ == ಎಲೆಗಳ ರಸ ಗೊರಲಿನ ಕೆಮ್ಮಲನ್ನೂ ಹೊರ ಬೀಳುವ ಕಫವನ್ನೂ ನಿಲ್ಲಿಸುತ್ತದೆ. ಪೂರ್ವ ಆಫ್ರಿಕ ದೇಶದಲ್ಲಿ ಬೇರು ಮತ್ತು ಎಲೆಗಳನ್ನು ಹಾವಿನ ಕಡಿತಕ್ಕೆ ಔಷಧಿಯಾಗಿ ಉಪಯೋಗಿಸುತ್ತಾರೆ. ಈ ಸಸ್ಯದ ಹಣ್ಣುಗಳನ್ನು ತಿನ್ನುವ ಆಡುಗಳು ರುಚಿಕರವಾದ ಹಾಲು ಕೊಡುವುವೆಂದು ತಿಳಿದಿದೆ. == ಉಲ್ಲೇಖಗಳು ==