ಈಕ್ವಿಲೆನಿನ್ (C18H18O2) ಮತ್ತು ಈಕ್ವಿಲಿನ್ (C18H20O2) ಈಸ್ಟ್ರೊಜನ್ ವರ್ಗಕ್ಕೆ ಸೇರಿದ ಸ್ತ್ರೀಲಿಂಗ ನಿರ್ಣಾಯಕ ಚೋದನಿಕಗಳು (ಹಾರ್ಮೋನ್ಸ್). ಇವೆರಡೂ ಗರ್ಭಿಣಿಯಾದ ಹೆಣ್ಣು ಕುದುರೆಗಳ ಮೂತ್ರದಲ್ಲಿ ವಿಪುಲ ಪ್ರಮಾಣದಲ್ಲಿರುತ್ತವೆ. ಅವುಗಳ ರಚನೆಯಲ್ಲಿ ಈಕ್ವಿಲೆನಿನ್ನಿಗಿಂತ ಈಕ್ವಿಲಿನ್ ಹೆಚ್ಚು ಕ್ರಿಯಾಶಾಲಿಯಾದುದು. ಈ ಸೂತ್ರವನ್ನು ಕೆಳಗೆ ಕೊಡಲಾಗಿದೆ. ಈಕ್ವಿಲೆನಿನ್ನಿನ ದ್ರವೀಕರಣ ಬಿಂದು 258o - 259೦ ಸೆಂ. ಗ್ರೇ. ಈಕ್ವಿಲೆನಿನ್ ದ್ರವೀಕರಣ ಬಿಂದು 238o – 240o ಸೆಂ. ಗ್ರೇ. ಅಡ್ರಿನಲ್ ಗ್ರಂಥಿಗೆ ಕ್ಯಾನ್ಸರ್ ರೋಗ ತಗುಲಿದಾಗ ಅದರ ಅಂಗಾಂಶಗಳಲ್ಲಿ ಈಕ್ವಿಲೆನಿನ್ ಇರುವುದು ಮಾನವ ದೇಹದಲ್ಲೂ ವ್ಯಕ್ತವಾಗಿದೆ. ಇದು ಮಹತ್ತ್ವದ ಸಂಗತಿ. == ಉಲ್ಲೇಖಗಳು ==