ಈಥೇನ್ ಪರ್ಯಾಪ್ತ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್ನುಗಳಾದ ಪ್ಯಾರಾಫಿನ್ ಅಥವಾ ಆಲ್ಕೇನ್ ವರ್ಗಕ್ಕೆ ಸೇರಿದ ಸಂಯುಕ್ತ. ರಚನಾ ಸೂತ್ರ C2H6. == ಪಡೆಯುವ ವಿಧಾನಗಳು == === ವಿಧಾನ-೧ === ನೈಸರ್ಗಿಕ ಅನಿಲದಲ್ಲಿ ೫% - ೨೦% ಈಥೇನಿರುತ್ತದೆ. ಮೀಥೇನ್ ತಯಾರಿಸಲು ನಾವು ಬಳಸುವ ಸಾರ್ವತ್ರಿಕ ವಿಧಾನಗಳು ಇದಕ್ಕೂ ಅನ್ವಯಿಸುತ್ತವೆ. ಸೋಡಿಯಂ ಪ್ರೊಪಿಯೊನೇಟನ್ನು ಸೋಡಾ ಸುಣ್ಣದೊಡನೆ ಕಾಯಿಸಿ ಈಥೇನ್ ಪಡೆಯಬಹುದು. 3 − 2 − → △ 3 − 3 {\ {\ {CH3-CH2-->[{\{ }}][\ ]CH3-CH3}}} === ವಿಧಾನ-೨ === ಈಥೈಲ್ ಆಲ್ಕೊಹಾಲಿನ ಸಮ್ಮುಖದಲ್ಲಿ ಸತು-ತಾಮ್ರದ ಜೋಡಿಯಿಂದ ಈಥೈಲ್ ಅಯೋಡೈಡನ್ನು ಅಪಕರ್ಷಿಸಿದಾಗ ಪರಿಶುದ್ಧ ಈಥೇನ್ ದೊರೆಯುವುದು. CH3.CH2. + 2[] → CH3-CH3 + === ವಿಧಾನ-೩ === ಶುಷ್ಕ ಈಥರ್ ದ್ರಾವಣದಲ್ಲಿ ಮೀಥೈಲ್ ಅಯೋಡೈಡ್ ಮತ್ತು ಶುದ್ಧ ಸೋಡಿಯಂ ಲೋಹ ಪರಸ್ಪರ ವರ್ತಿಸಿದಾಗ ಈಥೇನ್ ಹುಟ್ಟುವುದು. 2 3 − + 2 → 3 − 3 + 2 {\ {\ {2CH3-{}+2Na->[{\{ }}]CH3-CH3{}+2NaI}}} ವುರ್ಟ್ಸ್ ಎಂಬ ಫ್ರೆಂಚ್ ರಸಾಯನ ವಿಜ್ಞಾನಿ ೧೮೫೫ರಲ್ಲಿ ಈ ಕ್ರಿಯಾ ವಿಧಾನವನ್ನು ಕಂಡುಹಿಡಿದ. ಆದ್ದರಿಂದ ಇದಕ್ಕೆ ವುರ್ಟ್ಸ್ ಸಂಯೋಜನೆ ಎಂದು ಹೆಸರಾಗಿದೆ. === ವಿಧಾನ-೪ === ಸೋಡಿಯಂ ಅಸಿಟೇಟಿನ ಪ್ರಬಲ ನೀರಿನ ದ್ರಾವಣವನ್ನು ಪ್ಲ್ಯಾಟಿನಂ ಧನಧ್ರುವದ ನೆರವಿನಿಂದ ವಿದ್ಯುದ್ವಿಭಜನೆ ಮಾಡಿದಾಗ ಈಥೇನ್ ಮತ್ತು ಇಂಗಾಲದ ಡೈಆಕ್ಸೈಡುಗಳು ಧನುಧ್ರುವದಲ್ಲೂ ಸೋಡಿಯಂ ಹೈಡ್ರಾಕ್ಸೈಡ್ ಮತ್ತು ಹೈಡ್ರೊಜನ್ ಋಣ ಧ್ರುವದಲ್ಲೂ ಬಿಡುಗಡೆಯಾಗುವುವು. 2CH3COONa + 2H2O → CH3CH3 + 2NaOH+ 2CO2 + H2 ೧೮೪೮ರಲ್ಲಿ ಜರ್ಮನ್ ರಸಾಯನಶಾಸ್ತ್ರ ವಿಜ್ಞಾನಿ ಎ.ಡಬ್ಲು.ಎಚ್.ಕೋಲ್ಬೆ ಈ ಕ್ರಿಯಾ ವಿಧಾನವನ್ನು ಶೋಧಿಸಿದುದರಿಂದ ಇದಕ್ಕೆ ಕೋಲ್ಬೆ ಸಂಯೋಜನೆ ಎಂಬ ಹೆಸರು ಬಂದಿದೆ. === ವಿಧಾನ-೫ === ಎಥಿಲೀನ್ ಮತ್ತು ಹೈಡ್ರೋಜನ್ನುಗಳ ಮಿಶ್ರಣವನ್ನು ಉನ್ನತ ಉಷ್ಣತೆಯಲ್ಲಿ ಸೂಕ್ಷ್ಮಕಣಗಳ ರೂಪದಲ್ಲಿರುವ ನಿಕ್ಕಲ್ ವೇಗವರ್ಧಕದ ಮೇಲೆ ಹಾಯಿಸಿಯೂ ಈಥೇನ್ ತಯಾರಿಸಬಹುದು. CH2=CH2 + H2 → CH3-CH3 == ಈಥೇನ್‍ನ ಗುಣಗಳು == ಭೌತ ಮತ್ತು ರಾಸಾಯನಿಕ ಗುಣಗಳಲ್ಲಿ ಈಥೇನ್ ಮೀಥೇನನ್ನು ಹೋಲುವುದು. ಇದು ಬಣ್ಣ ವಾಸನೆಗಳಿಲ್ಲದ ಅನಿಲ. ೪೦ ಸೆಂ.ಗ್ರೇ. ಉಷ್ಣತೆ ಮತ್ತು ೪೬ ವಾಯುಭಾರ ಒತ್ತಡದಲ್ಲಿ ದ್ರವರೂಪ ತಳೆಯುವುದು (ಕುದಿಯುವ ಬಿಂದು -೮೮.೬ ಸೆಂ.ಗ್ರೇ.) ನೀರಿನಲ್ಲಿ ಅದ್ರಾವ್ಯವಾದರೂ ಆಲ್ಕೊಹಾಲಿನಲ್ಲಿ ಲೀನವಾಗುವುದು. ರಾಸಾಯನಿಕವಾಗಿ ಮೀಥೇನಿನಂತೆಯೇ ಜಡವಾದ ಅನಿಲ. ಕ್ಲೋರಿನ್ನಿನೊಡನೆ ವರ್ತಿಸಿದಾಗ ಈಥೇನಿನ ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣುಗಳು ಕ್ರಮೇಣ ಪಲ್ಲಟಿತವಾಗುವುವು. C2H6 + Cl2 → C2H5Cl + () () C2H5Cl + Cl2 → C2H4Cl2 + () () C2H4Cl2 + Cl2 → C2H3Cl3 + () () C2H3Cl3 + Cl2 → C2H2Cl4 + () () C2H2Cl4 + Cl2 → C2HCl5 + () () C2HCl5 + Cl2 → C2Cl6 + () () ಸುಮಾರು ೮೦೦o ಸೆಂ.ಗ್ರೇ. ಉಷ್ಣತೆಯಲ್ಲಿ ಹೈಡ್ರೊಜನನ್ನು ಕಳೆದುಕೊಂಡು ಎಥಿಲೀನ್ ಆಗುವುದು. ನೈಸರ್ಗಿಕ ಅನಿಲದಲ್ಲಿರುವ ಈಥೇನ್ ಮತ್ತು ಪ್ರೋಪೇನ್ ಭಾಗವನ್ನು ಹೀಗೆ ಲಾಭದಾಯಕವಾಗಿ ಎಥಿಲೀನಿಗೆ ಪರಿವರ್ತಿಸುವರು. ಶೈತ್ಯಕಾರಕ ಯಂತ್ರಗಳಲ್ಲಿ ಈಥೇನನ್ನು ಸಹ ಉಪಯೋಗಿಸುತ್ತಾರೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 0266 -