ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಪಟ್ಟಣ. ಇದು ಬೆಳ್ತಂಗಡಿಯಿಂದ ಚಾರ್ಮಾಡಿ ಅಥವಾ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ೬ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಶ್ರೀಕ್ಷೇತ್ರ ಧರ್ಮಸ್ಥಳವು ೯ ಕಿ.ಮೀ. ದೂರ ಇದೆ. == ಜನಸಂಖ್ಯೆ == ೨೦೧೧ ರ ಭಾರತದ ಜನಗಣತಿಯ ಪ್ರಕಾರ ಉಜಿರೆಯು 13429 ಜನಸಂಖ್ಯೆಯನ್ನು ಹೊಂದಿದ್ದು, 6628 ಪುರುಷರು ಮತ್ತು 6801 ಮಹಿಳೆಯರು ಇದ್ದಾರೆ. == ಶಿಕ್ಷಣ ಸಂಸ್ಥೆಗಳು == ಉಜಿರೆ ಶೈಕ್ಷಣಿಕ ಪಟ್ಟಣವೆಂದು ಖ್ಯಾತಿ ಪಡೆದಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು, ಎಸ್ ಡಿ ಎಂ ಸ್ನಾತಕೋತ್ತರ ಕಾಲೇಜು, ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜು, ಎಸ್ ಡಿ ಎಂಪ್ರಕೃತಿ ಮತ್ತು ಯೋಗ ಚಿಕಿತ್ಸೆಯ ಕಾಲೇಜು, ಎಸ್ ಡಿ ಎಂ ಪದವಿಪೂರ್ವ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳಿವೆ. == ಧಾರ್ಮಿಕ ಸ್ಥಳಗಳು == == ಪ್ರವಾಸಿ ತಾಣಗಳು == ಉಜಿರೆ, ಅದರ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಟ್ರೆಕ್ಕಿಂಗ್ ಆರಂಭ ಸ್ಥಳಗಳಿಗೆ ಹತ್ತಿರದಲ್ಲಿದೆ. ಹತ್ತಿರದಲ್ಲಿರುವ ಚಾರಣ ಸ್ಥಳಗಳೆಂದರೆ ನರಸಿಂಹ ಘಡ / ಜಮಾಲಾಬಾದ್ ಕೋಟೆ - 5 ಕಿಮೀ ಬಂಡಾಜೆ ಅರ್ಬಿ ಫಾಲ್ಸ್ / ಜಲಪಾತ -15 ಕಿಮೀ ಚಾರ್ಮಾಡಿ ಘಾಟಿ == ಚಿತ್ರಗಳು == == ಉಲ್ಲೇಖಗಳು ==