ಹಿಂದೂ ಧರ್ಮದಲ್ಲಿ, ಉಪಚಾರ (ಸೇವೆ ಅಥವಾ ಸೌಜನ್ಯ) ಶಬ್ದವು ಪೂಜೆಯ ಭಾಗವಾಗಿ ದೇವರಿಗೆ ಮಾಡಲಾದ ಅರ್ಪಣೆಗಳು ಮತ್ತು ಸೇವೆಗಳನ್ನು ಸೂಚಿಸುತ್ತದೆ. ಉಪಚಾರಗಳು ಪ್ರಾರ್ಥನೆಯ ರೂಪಕ್ಕೆ ಅನುಗುಣವಾಗಿ ಬದಲಾಗುತ್ತಾವಾದರೂ, ಒಬ್ಬ ಗೌರವಾನ್ವಿತ ಅತಿಥಿಯನ್ನು ಸ್ವಾಗತಿಸುವ ಪ್ರಕ್ರಿಯೆಗೆ ಸದೃಶವಾದ ೧೬ ಉಪಚಾರಗಳ ಒಂದು ಸಾಮಾನ್ಯ ಪಟ್ಟಿ ಮುಂದಿದೆ: ಆವಾಹನೆ: ದೇವರನ್ನು ಆಹ್ವಾನಿಸುವುದು ಆಸನ: ದೇವರಿಗೆ ಕೂಡಲು ಪೀಠವನ್ನು ನೀಡುವುದು ಪಾದ್ಯ: ಪಾದಗಳನ್ನು ತೊಳೆಯಲು ನೀರು ಕೊಡುವುದು ಅರ್ಘ್ಯ: ಪಾನೀಯವನ್ನು ನೀಡುವುದು ಆಚಮನೀಯ: ಬಾಯಿ ತೊಳೆಯಲು ನೀರು ಕೊಡುವುದು ಸ್ನಾನ ಅಥವಾ ಅಭಿಷೇಕ: ಸ್ನಾನ ಮಾಡುವುದು ವಸ್ತ್ರ: ಬಟ್ಟೆ ಅಥವಾ ಉಡುಪನ್ನು ನೀಡುವುದು ಯಜ್ಞೋಪವೀತ ಅಥವಾ ಮಂಗಳಸೂತ್ರ: ಪವಿತ್ರ ದಾರವನ್ನು ಧರಿಸುವುದು ಅನುಲೇಪನ ಅಥವಾ ಗಂಧ: ಸುಗಂಧದ್ರವ್ಯವನ್ನು ಸಿಂಪಡಿಸುವುದು ಪುಷ್ಪ: ಹೂವುಗಳನ್ನು ನೀಡುವುದು ಧೂಪ: ಧೂಪದ್ರವ್ಯವನ್ನು ಬೆಳಗುವುದು ದೀಪ ಅಥವಾ ಆರತಿ: ದೇವರ ಮುಂದೆ ಎಣ್ಣೆಯ ದೀಪವನ್ನು ಬೆಳಗುವುದು ನೈವೇದ್ಯ: ಆಹಾರ ಅರ್ಪಿಸುವುದು ನಮಸ್ಕಾರ ಅಥವಾ ಪ್ರಣಾಮ: ಗೌರವಯುತ ಸಾಷ್ಟಾಂಗವೆರಗುವಿಕೆ ಅಥವಾ ವಂದನೆ ಪರಿಕ್ರಮ ಅಥವಾ ಪ್ರದಕ್ಷಿಣೆ. ಸುತ್ತ ತಿರುಗುವುದು ವಿಸರ್ಜನೆ: ಬೀಳ್ಕೊಡುವುದು. == ಉಲ್ಲೇಖಗಳು ==