ಉಪ್ಪುಂದ ಇದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಒಂದು ಪುಟ್ಟ ಊರು. ಒಂದು ಬದಿಯಲ್ಲಿ ಅರಬ್ಬಿ ಸಮುದ್ರ ಹಾಗೂ ಒಂದು ಬದಿಯಲ್ಲಿ ಸಣ್ಣ ಬೆಟ್ಟಗಳಿಂದ ಕೂಡಿ ಸುಂದರವಾಗಿ ಕಾಣುತ್ತದೆ. ಈ ಊರು ಮಂಗಳೂರಿನಿಂದ ೧೧೯ ಕಿ.ಮಿ. ದೂರವಿದೆ. ಈ ಊರಿಗೆ ಹತ್ತಿರವಿರುವ ವಿಮಾನ ನಿಲ್ದಾಣ ಮಂಗಳೂರಿನ ವಿಮಾನ ನಿಲ್ದಾಣ. ೧೯೫೧ ತನಕ ಇದು ಮದ್ರಾಸ್ ರಾಜ್ಯದ ಭಾಗವಾಗಿತ್ತು. === ಇತಿಹಾಸ === ಇದರ ಮೊದಲ ಹೆಸರು ಉಪ್ಪುಗುಂದ.ಇಲ್ಲಿ ಪುರಾತನವಾದ ದುರ್ಗಾಪರಮೇಶ್ವರಿ ದೇವಸ್ಥಾನವಿದೆ.ಇದರಲ್ಲಿ ಇತಿಹಾಸಕ್ಕೆ ಸಂಬಂದಿಸಿದಂತೆ ಮೂರು ಶಾಸನಗಳಿವೆ. === ಜನಸಂಖ್ಯೆ === ೨೦೦೧ ರ ಜನಗಣತಿಯಂತೆ ಇಲ್ಲಿ ೫೨೨೧ ಪುರುಷರು ಮತ್ತು ೫೮೫೨ ಮಹಿಳೆಯರು ಸೇರಿದಂತೆ ೧೦೦೭೩ ಜನರು ವಾಸಮಾಡುತ್ತಿದ್ದಾರೆ. === ಬಾಹ್ಯಸಂಪರ್ಕ === ://.../ 2012-03-03 ವೇಬ್ಯಾಕ್ ಮೆಷಿನ್ ನಲ್ಲಿ. ://../