ಉಲ್ಕಾವೃಷ್ಟಿಯು ರಾತ್ರಿ ಆಕಾಶದಲ್ಲಿ ಒಂದು ಬಿಂದುವಿನಿಂದ ಅನೇಕ ಉಲ್ಕೆಗಳು ಉತ್ಪತ್ತಿಯಾದಂತೆ ಕಾಣುವ ಒಂದು ಖಗೋಳ ಘಟನೆ. ಈ ಉಲ್ಕೆಗಳಿಗೆ ಕಾರಣ ಸಮಾನಾಂತರ ಪಥಗಳ ಮೇಲೆ ವಿಪರೀತವಾದ ಅತಿವೇಗದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸುವ, ಉಲ್ಕಾಕಲ್ಪಗಳೆಂದು ಕರೆಯಲಾದ, ಬಾಹ್ಯಾಕಾಶದ ಭಗ್ನಾವಶೇಷಗಳ ಪ್ರವಾಹ. ಬಹುತೇಕ ಉಲ್ಕೆಗಳು ಮರಳಿನ ಒಂದು ಕಣಕ್ಕಿಂತ ಚಿಕ್ಕದಾಗಿರುತ್ತವೆ, ಹಾಗಾಗಿ ಬಹುತೇಕ ಎಲ್ಲವೂ ವಿಘಟಿತವಾಗುತ್ತವೆ ಮತ್ತು ಭೂಮಿಯ ಮೇಲ್ಮೈಯನ್ನು ಎಂದಿಗೂ ಮುಟ್ಟುವುದಿಲ್ಲ. ಯಾವುದೇ ಉಲ್ಕಾವೃಷ್ಟಿಯ ಸಮಯವನ್ನು ಲೆಕ್ಕ ಹಾಕಲು ಬೇರೆ ಬೇರೆ ಮಾಹಿತಿಗಳು ಅಗತ್ಯವಾಗುತ್ತವೆ.ಉದಾಹರಣೆಗೆ ಧೂಮಕೇತುವಿನ ಕಕ್ಷೆಯ ಪರ್ವಬಿಂದುವಿನ ಕನಿಷ್ಟ ದೂರ,ಧೂಳಿನ ಸಮೂಹ ಚಲನೆ,ಅಕಸ್ಮಾತ್ ಗುರುಗ್ರಹದಂತಹ ದೊಡ್ಡ ಕಾಯ ಹಾದುಹೋಗಿದ್ದರೆ ಅದರಿಂದ ಚಲನೆಯಲ್ಲಿ ಉಂಟಾಗುವ ಕ್ಷೋಭೆ-ಹೀಗೆ.ಇವೆಲ್ಲವೂ ಸೇರಿ ಗರಿಷ್ಟ ಉಲ್ಕೆಗಳ ಅಂದರೆ ಧೂಳು ಮತ್ತು ಭೂಮಿಯ ನಡುವಿನ ಕನಿಷ್ಟ ಅಂತರದ ಸಮಯವನ್ನು ಲೆಕ್ಕ ಹಾಕಬಹುದು.ಇದಾದ ಮೇಲೆ ಆ ಸಮಯದಲ್ಲಿ ಯಾವ ಭೂ ಭಾಗದಲ್ಲಿ ಮುಂಜಾವು ಆಗುತ್ತದೆಯೋ ಅಲ್ಲಿ ಮಾತ್ರ ಗರಿಷ್ಟ ಕಾಣುತ್ತದೆ ಎಂದು ಘೋಷಿಸಬಹುದು. ಸಂಜೆಗಿಂತ ಮುಂಜಾವಿನಲ್ಲೇ ಹೆಚ್ಚು ಉಲ್ಕೆಗಳು ಕಾಣುತ್ತವೆ.ಏಕೆಂದರೆ ಉಲ್ಕಾ ಕಣವೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕೂಡಲೇ ಅದಕ್ಕೆ ತನ್ನ ವೇಗದ ಜೊತೆಗೆ ಭೂಮಿಯ ಆವರ್ತನದ ವೇಗವೂ ದೊರಕುತ್ತದೆ.ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುವ ಕಾರಣ ಈ ವೇಗವೂ ಅದೇ ದಿಕ್ಕಿನಲ್ಲಿ ಅಂದರೆ ಪೂರ್ವ ದಿಕ್ಕಿಗೆ ಇರುತ್ತದೆ.ಆದ್ದರಿಂದ ಎಲ್ಲ ಉಲ್ಕೆಗಳನ್ನೂ ಪೂರ್ವಕ್ಕೆ ತಳ್ಳಿದಂತಾಗುತ್ತದೆ.ಪೂರ್ವದಲ್ಲಿ ಅಂದರೆ ಸೂರ್ಯೋದಯಕ್ಕೆ ಸಿದ್ಧವಾಗಿರುವ ವೀಕ್ಷಕನಿಗೆ ಪಶ್ಚಿಮದಲ್ಲಿ ನಿಂತ ವೀಕ್ಷಕನಿಗಿಂತ ಹೆಚ್ಚು ಉಲ್ಕೆಗಳನ್ನು ಕಾಣುವ ಅವಕಾಶ ಸಿಗುತ್ತದೆ. == ಉಲ್ಲೇಖ == ಉಲ್ಕಾಪಾತ - ಉಲ್ಕಾಶಿಲೆ- ಉಲ್ಕಾಭ - ಕ್ಷುದ್ರಗ್ರಹ- ಅರಾಯನಿಡ್ ?? -