ಒಂದು ನಿರ್ದಿಷ್ಟ ರಾಸಾಯನಿಕ ಸಂಯುಕ್ತವನ್ನು ಕಾಯಿಸಿದಾಗ ಅದು ವಿಭಜಿಸಿ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳನ್ನು ಉತ್ಪತ್ತಿ ಮಾಡಿದರೆ ಆ ಕ್ರಿಯೆಗೆ ಉಷ್ಣವಿಭಜನೆ ಎಂದು ಹೆಸರು. ಇದು ಒಂದು ಬಗೆಯ ರಾಸಾಯನಿಕ ಬದಲಾವಣೆ (ಥರ್ಮಲ್ ಡೀಕಾಂಪೊಸಿಷನ್). ಇದಕ್ಕೆ ಅನೇಕ ನಿದರ್ಶನಗಳನ್ನು ಕೊಡಬಹುದು. 2HgO → 2Hg + O2 NH4NO3 → N2O + 2H2O (NH4)2Cr2O7 → N2 + Cr2O3 + 4H2O ಇತ್ಯಾದಿ. ಉಷ್ಣದ ನೆರವಿನಿಂದ ಆಗುವ ಈ ಕ್ರಿಯೆ ವಿಪರ್ಯಾಯವಾಗಬಲ್ಲುದಾದರೆ ಅಂದರೆ ಉತ್ಪನ್ನ ಪದಾರ್ಥಗಳು ಕಡಿಮೆ ಉಷ್ಣದಲ್ಲಿ ಪುನಃ ಸಂಯೋಗ ಹೊಂದಿ ಮೂಲ ಪದಾರ್ಥವನ್ನು ಉತ್ಪತ್ತಿಮಾಡುವುದಾದರೆ ಆ ಕ್ರಿಯೆಗೆ ಉಷ್ಣವಿಯೋಜನೆ ಎಂದು ಹೆಸರು. ಇದೂ ಒಂದು ಬಗೆಯ ರಾಸಾಯನಿಕ ಬದಲಾವಣೆ (ಥರ್ಮಲ್ ಡಿಸೋಸಿಯೇಷನ್). ಇದಕ್ಕೆ ಕೆಲವು ನಿದರ್ಶನಗಳು- 2 ⇌ 2 + 2 {\ {\ {2HI <=>[] H2 + I2}}} 5 ⇌ 3 + 2 {\ {\ {PCl5 <=>[] PCl3 + Cl2}}} 4 ⇌ 3 ↑ + {\ {\ {NH4Cl <=>[] NH3 ^ + }}} ಇತ್ಯಾದಿ. == ಉಲ್ಲೇಖಗಳು ==