ಋಷಿ ಎಂಬುವುದು ಭಾರತದ ಪುರಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ ಪದ. ತಪಸ್ಸಿನ ಫಲದಿಂದ ಜ್ಞಾನ ಪಡೆದ, ವೇದ ಪಠಣ ಮಾಡಿದ ಸಾಧಕರನ್ನು ಋಷಿ ಎನ್ನುತ್ತಾರೆ. ತಪಸ್ವಿ, ಋಷಿ, ಮುನಿ ಎಲ್ಲಾ ಪರ್ಯಾಯ ಪದಗಳು. ರಾಜರ್ಷಿ(ರಾಜ+ಋಷಿ), ಮಹರ್ಷಿ(ಮಹಾ + ಋಷಿ),ಬ್ರಹ್ಮರ್ಷಿ(ಬ್ರಹ್ಮ+ಋಷಿ) ಇವೆಲ್ಲಾ ಋಷಿಗಳಲ್ಲೇ ಬೇರೆ ಬೇರೆ ಸ್ತರದ ಜ್ಞಾನಿಗಳನ್ನು ಸೂಚಿಸುತ್ತವೆ.ಪುರಾಣಗಳಲ್ಲಿ ಋಷಿಗಳನ್ನು ಈ ಹೆಸರಿನೊಂದಿಗೆ ಸೇರಿಸಿ ಉಲ್ಲೇಖಿಸುತ್ತಾರೆ. == ಸಪ್ತರ್ಷಿಗಳು == ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ. ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ - ಮಹಾಭಾರತದ ಶಾಂತಿಪರ್ವದಲ್ಲಿ ಇರುವಂತೆ. ಇವರು ಕಲ್ಪಭೇದದಿಂದ ಭಿನ್ನ ಭಿನ್ನರಾಗಿರುತ್ತಾರೆ. == ಇದನ್ನೂ ನೋಡಿ == ಹಿಂದೂ ಋಷಿಗಳು