ಎ ಕನ್ನಡ ವರ್ಣಮಾಲೆಯ ಎಂಟನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ. == ಚಾರಿತ್ರಿಕ ಹಿನ್ನೆಲೆ == ಕನ್ನಡ ವರ್ಣಮಾಲೆಯ ಒಂಬತ್ತನೆಯ ಅಕ್ಷರ. ಹ್ರಸ್ವ ಸ್ವರ. ಸಂಸ್ಕøತದಲ್ಲಿ ಹ್ರಸ್ವ ಎಕಾರವಿಲ್ಲವಾಗಿ ಬ್ರಾಹ್ಮೀ ಲಿಪಿಯ ಲೇಖಗಳಲ್ಲಿ ಈ ಅಕ್ಷರದ ರೂಪ ದೊರೆಯದು. ಕನ್ನಡದಲ್ಲಿ ಈ ಲಿಪಿ ಮತ್ತು ಉಚ್ಛಾರಣೆ ಬಳಕೆಯಲ್ಲಿದ್ದರೂ ಪ್ರಾಚೀನ ಕನ್ನಡದ ಶಾಸನಗಳಲ್ಲಿ ಎ ಕಾರಕ್ಕೆ ಬದಲು ಏ ಕಾರವನ್ನೇ ಬಳಸಲಾಗಿದೆ. ಬಹುಶಃ ಇದು ಸಂಸ್ಕøತ ಪ್ರಭಾವದಿಂದ ಆಗಿರಬಹುದು. ಬರವಣಿಗೆಯಲ್ಲಿ ಒಂದೇ ಅಕ್ಷರ ಕಂಡುಬಂದರೂ ಸಂದರ್ಭಕ್ಕೆ ತಕ್ಕಂತೆ ಹ್ರಸ್ವವಾಗಿಯೊ ದೀರ್ಘವಾಗಿಯೊ ಉಚ್ಛರಿಸುವ ವಾಡಿಕೆ ಇತ್ತು. ಲಿಪಿಯ ದೃಷ್ಟಿಯಿಂದ ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗಿರುವ ವ್ಯತ್ಯಾಸ ಯಾವಾಗ ರೂಢಿಗೆ ಬಂತು ಎಂದು ಹೇಳುವುದು ಕಷ್ಟ. ಕ್ರಿ.ಶ.15ನೆಯ ಶತಮಾನದ ವಿಜಯನಗರ ಕಾಲದಲ್ಲಿ ವ್ಯಂಜನಾಕ್ಷರಗಳೊಂದಿಗಿನ ಎ ವರ್ಣದ ರೂಪ ಹೇಗಿತ್ತೆಂಬುದನ್ನು ಚಿತ್ರದಲ್ಲಿ ತೋರಿಸಿದೆ. == ಶಾಸ್ತ್ರೀಯ ವಿವರ == ಈ ಅಕ್ಷರ ಪೂರ್ವ ಅಗೋಲ ಅರ್ಧ ಸಂವೃತ ಹ್ರಸ್ವಸ್ವರವನ್ನು ಸೂಚಿಸುತ್ತದೆ. == ಸ್ವರಾಕ್ಷರಗಳು ಎಂದರೇನು ? == ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್. ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ, ಅ,ಆ, ಇ, ಈ, ಉ, ಊ, ಋ, ೠ , ಌ, ೡ, ಏ, ಐ, ಓ, ಔ. === ಹೃಸ್ವಸ್ವರ === ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಅ, ಇ, ಉ, ಋ, ೡ. ಎ, ಒ - ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಎ ಅಕ್ಷರವೂ ಒಂದಾಗಿದೆ. == ಕನ್ನಡದ ನಾವಿ ಸ್ವರಗಳು == ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ. == 'ಎ ಅಕ್ಷರವನ್ನು ಉಚ್ಛರಿಸುವ ವಿಧಾನ == == ಎ ದಿಂದ ಆರಂಭವಾಗುವ ನಾಮಪದಗಳುಪ್ರಾಣಿ ಸಂಬಂಧಿ ಪದ : ಎಮ್ಮೆ == ಮನುಷ್ಯ ಸಂಬಂಧಿ ಪದ : ಎಲ್ಲಪ್ಪ ಸಸ್ಯ ಸಂಬಂಧಿ ಪದ : ಎಲೆ == ಎ ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳುಎಂಟು, ಎಂಬತ್ತು, ಎಪ್ಪತ್ತು == == ಉಲ್ಲೇಖ ==