ಎ.ಪಂಕಜಾ ಇವರು ೧೯೩೨ ಎಪ್ರಿಲ್ ೨೦ರಂದು ಕೋಲಾರ ಜಿಲ್ಲೆಯ ಪಾವಗಡದಲ್ಲಿ ಜನಿಸಿದರು. ಇವರ ತಾಯಿ ವಕುಳಮ್ಮ ; ತಂದೆ ಶ್ರೀನಿವಾಸಾಚಾರ್ ; ಪತಿ ಅನಂತಸ್ವಾಮಿ. ಸಂಗೀತಗಾರರ ಮನೆತನ. ತಂದೆ ಪ್ರಖ್ಯಾತ ಪಿಟೀಲು ವಿದ್ವಾಂಸರು. ಓದಿದ್ದು ಇಂಟರ್ ಮೀಡಿಯಟ್‌ವರೆಗೆ. ಹಿಂದಿ ಭಾಷೆಯಲ್ಲಿ ವಿದ್ವಾನ್‌ ಪದವಿ. ಇವರು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ “ಚಂದನಾ” ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ. == ಕೃತಿಗಳು == === ಕಾದಂಬರಿ === ಅನುರಾಗ ಬಂಧನ ಅವನೇ ಕಾರಣ ಕಾಗದದ ದೋಣಿ ನಾದಭಂಗ ನೀನಾ (ಪತ್ತೇದಾರಿ) ನೋವು ನಲಿವು ಪ್ರೇಮಸಂಗಮ ಬಂಗಾರದ ಬಲೆ ಬಯಕೆಯ ಬೆಂಕಿ ಬಲಿಪಶು ಮಮತೆಯ ಮಡಿಲಲ್ಲಿ ರಾಗಸುಧಾ ವಿಜಯಗೀತ ಸುಖಸ್ವಪ್ನ ಸೊಗಸುಗಾತಿ ಸ್ನೇಹಸಂಬಂಧ ಹೊಸ ಹಾದಿಯಲ್ಲಿ === ನಾಟಕ === ಊರ್ಮಿಳಾ === ವಿಚಾರ ಸಾಹಿತ್ಯ === ಮದುವೆ ಮತ್ತು ಸ್ತ್ರೀ == ಪುರಸ್ಕಾರ == ಬೇರೆ ಮಾತೃಭಾಷೆಯವರು ಕನ್ನಡ ಕೃತಿ ರಚಿಸಿದುದಕ್ಕಾಗಿ ಇಟ್ಟಿರುವ ಕೇಂದ್ರ ಸರಕಾರದ ಬಹುಮಾನ ಇವರ ಎರಡು ಕೃತಿಗಳಿಗೆ ಲಭ್ಯವಾಗಿದೆ: ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’