ಡಾ. ಎಂ.ಎಸ್.ವೇದಾ ಕನ್ನಡ ಸಾಹಿತ್ಯದ ಗಂಭೀರ ವಿಚಾರಧಾರೆಯುಳ್ಳ ಸೃಜನಶೀಲ ಲೇಖಕಿ. ಇವರ ಸಾಹಿತ್ಯದ ಹರುಹು ದೊಡ್ಡದು. ಕವಿತೆ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ. === ಜನನ, ಶಿಕ್ಷಣ === ಇವರು ಮೇ ೦೪- ೧೯೬೫ ಮೈಸೂರಿನಲ್ಲಿ ಜನಿಸಿದರು. ಎಂ.ಎ(ಕನ್ನಡ), ಪಿಎಚ್.ಡಿ ಪದವೀಧರೆಯಾಗಿದ್ದಾರೆ. ಕನ್ನಡ ಸಾಹಿತಿ ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳನ್ನು ಕುರಿತು ಸಂಶೋಧನಾ ವ್ಯಾಸಂಗ ಮಾಡಿದ್ದಾರೆ. === ವೃತ್ತಿ ಜೀವನ === ಪ್ರಸ್ತುತ ಪಿರಿಯಾಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿದ್ದಾರೆ. ಸೂಕ್ಷ್ಮ ಸಂವೇದನೆಯ ಲೇಖಕಿಯಾದ ವೇದಾ ತಮ್ಮ ರಚನಾ ಕೌಶಲ್ಯ ಮತ್ತು ಪ್ರತಿಭೆಗಳನ್ನು ಸ್ತ್ರೀ ಬದುಕಿನ ಮೀಮಾಂಸೆಗಾಗಿ ದುಡಿಸಿಕೊಳ್ಳುತ್ತಾರೆ. === ಕಥಾ ಸಂಕಲನಗಳು === ಪ್ರೀತಿ ಮತ್ತು ಸಾವು ಪಾಲು (೧೯೯೭) ಬಿಳಿಯೆಣ್ಣು ಮತ್ತು ದುಂಡವ್ವನ ದೆವ್ವ(೨೦೦೨) ಈ ತನಕ(೨೦೧೦) === ಕಾದಂಬರಿಗಳು === ಜಮೀನು (೨೦೦೦) ಜಯ (೨೦೦೪) ಕಪ್ಪುಕಿವಿಯ ಬಿಳಿಯ ಕುದುರೆಗಳು (೨೦೦೭) ರಾಜ ಒಡೆಯರು (೨೦೧೪) ದೊಡ್ಡ ತಾಯಿ. === ಕಾವ್ಯ ಸಂಕಲನಗಳು === ಕಾವ್ಯಕೂಸು (೧೯೮೫) ಗಂಗೋತ್ರಿಯಲ್ಲಿ (೧೯೮೭) ಬಿಳಲುಗಳು (೧೯೮೯) === ನಾಟಕ === ಉತ್ತರ ಶಾಕುಂತಲಾ === ಪಿ.ಎಚ್ ಡಿ.ಮಹಾಪ್ರಬಂಧ === ಬಿ.ಪುಟ್ಟಸ್ವಾಮಯ್ಯನವರ ನಾಟಕ ಹಾಗೂ ಕಾದಂಬರಿಗಳ ಸಮಗ್ರ ಅಧ್ಯಯನ (೧೯೯೨) === ಸಾಹಿತ್ಯ ವಿಮರ್ಶೆ === ಆರ್ದ್ರಗರ್ವದ ಹುಡುಗಿ (೨೦೧೦) ಮಹಿಳಾ ಕಾವ್ಯ ಕಾರಣ (೨೦೧೬) === ವ್ಯಕ್ತಿ ಚಿತ್ರ === ಚದುರಂಗ (೨೦೦೧) === ಪ್ರಶಸ್ತಿಗಳು === ರಾಜ ಒಡೆಯರು ಕೃತಿಗೆ - ಎಚ್.ವಿ.ಸಾವಿತ್ರಮ್ಮ ಪ್ರಶಸ್ತಿ. ಸಾಹಿತ್ಯ ಶ್ರೀ ಪ್ರಶಸ್ತಿ - ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ. == ಉಲ್ಲೇಖಗಳು == .