ಎಕ್ವಡಾರ್, ಅಧಿಕೃತವಾಗಿ ಎಕ್ವಡಾರ್ ಗಣರಾಜ್ಯ (República ), ದಕ್ಷಿಣ ಅಮೇರಿಕದ ಒಂದು ಪ್ರಾತಿನಿಧಿತ್ವ ಪ್ರಜಾತಾಂತ್ರಿಕ ಗಣರಾಜ್ಯ. ಉತ್ತರಕ್ಕೆ ಕೊಲಂಬಿಯ, ಪೂರ್ವ ಮತ್ತು ದಕ್ಷಿಣಕ್ಕೆ ಪೆರು ಮತ್ತು ಪಶ್ಚಿಮಕ್ಕೆ ಶಾಂತ ಮಹಾಸಾಗರಗಳನ್ನು ಎಕ್ವಡಾರ್ ಹೊಂದಿದೆ. ಸಮಭಾಜ ರೇಖೆಯ (ಸ್ಪ್ಯಾನಿಷ್ ಭಾಷೆಯಲ್ಲಿ "") ಎರಡೂ ಬದಿಗಳಿಗಿರುವ ಈ ದೇಶವು ಅದಕ್ಕಾಗಿ ಹಾಗೆ ನೇಮಿತವಾಗಿದೆ. ಇದರ ರಾಜಧಾನಿ ಕ್ವಿಟೊ ಮತ್ತು ಅತಿ ದೊಡ್ಡ ನಗರ ಗುಅಯಖಿಲ್ ಆಗಿವೆ. ಖಂಡ ಭಾಗದ ಪ್ರದೇಶದಿಂದ ಸುಮಾರು ೯೬೫ ಕಿ.ಮಿ. ದೂರದಲ್ಲಿರುವ ಗ್ಯಾಲಪಗೊಸ್ ದ್ವೀಪಗಳು ಕೂಡ ಈ ದೇಶಕ್ಕೆ ಸೇರಿವೆ.