ಎಚ್.ಎಲ್.ಕೇಶವಮೂರ್ತಿಯವರು ೧೯೩೯ ಡಿಸೆಂಬರ್ ೨೮ರಂದು ಮಂಡ್ಯ ಜಿಲ್ಲೆಯ ಹೆರಗನಹಳ್ಳಿಯಲ್ಲಿ ಜನಿಸಿದರು. ಇಂಜನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಡ್ಯದ ಪಿ.ಇ.ಎಸ್. ಇಂಜಿನಿಯರ್ ಕಾಲೇಜಿ ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. == ಸಾಹಿತ್ಯ == ಎಚ್.ಎಲ್.ಕೇಶವಮೂರ್ತಿಯವರು ಕನ್ನಡದ ಹೆಸರಾಂತ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ: === ಕೃತಿಗಳು === ನೀನ್ಯಾಕೊ ನಿನ್ನ ಹಂಗ್ಯಾಕೊ ಮಾವ ಎಂಗಾರ ಟಿಕೆಟ್ ಕೊಡಿ ಗೌರವಾನ್ವಿತ ದಗಾಕೋರರು ಇಸ್ಪೀಟು ನ್ಯಾಯ ಜೆಂಟ್ಸ್ ದ್ರೌಪದಿ ವಸ್ತ್ರಾಪಹರಣ ಪ್ರಕರಣವು. == ಪ್ರಶಸ್ತಿ == ೧೯೭೨ರಲ್ಲಿ ಇವರ ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.