ಎಡೆಸ್ಟಿನ್ ಪುಂಡಿ ಬೀಜದಲ್ಲಿರುವ ಗ್ಲಾಬ್ಯುಲಿನ್ ಜಾತಿಗೆ ಸೇರಿದ ಪ್ರೋಟೀನು. ಇದನ್ನು ಸ್ಫಟಿಕೀಕರಿಸಲಾಗಿದೆ. ಇದು ಮತ್ತು ಇದರ ಹೈಡ್ರೊಕ್ಲೋರೈಡು ನೀರಿನಲ್ಲಿ ವಿಲೀನವಾಗುವುದಿಲ್ಲ. ಎಲೆಕ್ಟ್ರಾನ್ ಸೂಕ್ಷ್ಮದರ್ಶನ, ಅತಿ ಅಪಕೇಂದ್ರೀಯತೆ (ಅಲ್ಟ್ರಾ ಸೆಂಟ್ರಿಫ್ಯೂಗೇಶನ್) ಮತ್ತು ಬೆಳಕು ಚದುರಿಕೆ (ಲೈಟ್ ಸ್ಕ್ಯಾಟರಿಂಗ್) ವಿಧಾನಗಳಿಂದ ಎಡೆಸ್ಟಿನ್ನಿನ ಅಣುತೂಕ ೩೧,೦೦೦-೩೪,೦೦೦ ಎಂದು ನಿರ್ಧರಿಸಲಾಗಿದೆ. ಇದು ಬಹಳ ಜೀರ್ಣಸಾಧ್ಯವಾದ, ಲೆಗುಮಿನ್ ಪ್ರೋಟೀನ್. ಎಡೆಸ್ಟಿನ್‍ಗೆ ದೇಹದ ಮೇಲೆ ದಾಳಿಮಾಡುವ ಪದಾರ್ಥಗಳ ವಿರುದ್ಧ ಪ್ರತಿಕಾಯಗಳ ಉತ್ಪಾದನಾ ಪ್ರಕ್ರಿಯೆಯನ್ನು ಉತ್ತೇಜಿಸುವ ಅನನ್ಯ ಗುಣವಿದೆ. == ಉಲ್ಲೇಖಗಳು ==