ಎಬೊನೈಟ್ ಅಧಿಕ ಗಂಧಕ ಬೆರೆತ ಬಿರುಸಾದ ರಬ್ಬರ್. ರಬ್ಬರ್ ಮತ್ತು ಗಂಧಕವನ್ನು ಬೆರೆಸಿ ೧೪೦೦ - ೧೬೦೦ ಸೆಂ.ಗ್ರೇ. ಉಷ್ಣತೆಗೆ ಕಾಸಿ ಇದನ್ನು ತಯಾರಿಸಬಹುದು. ಸಾಮಾನ್ಯ ಉಷ್ಣತಾಮಿತಿಗಳಲ್ಲಿ ಬಿರುಸಾಗಿದ್ದು ಕಾಸಿದಾಗ ಮೃದುವಾಗುವುದು. ಸ್ಥಿತಿಸ್ಥಾಪಕತ್ವ ಗುಣವಿಲ್ಲ. ಗಡಸು ಮೈ. ಗೀರುನಿರೋಧಕವಾಗಿದೆ. ಎರಕಹೊಯ್ದು ರಂಧ್ರ ಮಾಡಿ ಚೆನ್ನಾಗಿ ಹೊಳೆಯುವಂತೆಯೂ ಮಾಡಬಹುದು. ವಿದ್ಯುನ್ನಿರೋಧಕವಸ್ತು. ಹಲವಾರು ರಾಸಾಯನಿಕಗಳು ಇದರೊಡನೆ ವರ್ತಿಸುವುದಿಲ್ಲ. == ಉಪಯೋಗಗಳು == ರೇಡಿಯೊ, ತಾಂತ್ರಿಕ ಮುಂತಾದ ಉದ್ದಿಮೆಗಳಲ್ಲಿ ಹೆಚ್ಚಿನ ಉಪಯೋಗವಿದೆ. ರಸಾಯನೋದ್ಯಮದಲ್ಲಿ ರಕ್ಷಕ ಪದರವಾಗಿ ಉಪಯೋಗಿಸುವರು. ಅಚ್ಚುಹಾಕಿ ಕೋಶಪೆಟ್ಟಿಗೆ ಫೌಂಟನ್ ಪೆನ್ನು ಕೊಳವೆ, ಟೆಲಿಫೋನ್, ಹೆಣಿಗೆ, ತಂಬಾಕು ಚಿಲುಮೆ ಮುಂತಾದ ಹಲವಾರು ನಿತ್ಯೋಪಯೋಗಕಾರಿ ವಸ್ತುಗಳನ್ನು ಇದರಿಂದ ತಯಾರಿಸಬಹುದು. == ಉಲ್ಲೇಖಗಳು ==