ಇಬೊಲ ರೋಗ () ಅಥವಾ ಎಬೊಲ ಹೆಮರಾಜಿಕ್ ಜ್ವರ (ಈ ಹೆಚ್ ಎಫ್), ಇದು ವೈರಾಣುವಿನಿಂದ ಉಂಟಾಗುವ ರೋಗ. ಹರಡುವಿಕೆ: ಕೋತಿ ಅಥವಾ ಬಾವಲಿಯ ರಕ್ತದ ಸೋಂಕಿನಿಂದ,ಸೋಂಕಿನ ಗಾಳಿ ಅಥವಾ ರೋಗಿಯ ವೀರ್ಯದಿಂದ ಹರಡುತ್ತದೆ. ಸಮಯ: ವೈರಸ್ ಸೋಂಕು ತಗುಲಿದ ಎರಡು ದಿನ ಅಥವಾ ಹೆಚ್ಚೆಂದರೆ ಮೂರು ವಾರಗಳ ಒಳಗೆ ಸಮಸ್ಯೆ ಶುರುವಾಗುತ್ತವೆ. ಲಕ್ಷಣಗಳು: ಗಂಟಲು ನೋವು, ಸ್ನಾಯು ನೋವು ಮತ್ತು ತಲೆನೋವು, ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯ ಹದಗೆಡುತ್ತದೆ. ಜೊತೆಗೆ ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಭೇದಿ, ಕೆಲವು ರೋಗಿಗಳು ರಕ್ತ-ಸ್ರಾವ ದಿಂದ ಕೂಡ ಬಳಲಬಹುದು. ಚಿಕಿತ್ಸೆ ಅಥವಾ ಮದ್ದು: ೨೦೧೪ರವರೆಗೆ ಯಾವುದೇ ಚುಚ್ಚುಮದ್ದು ಕಂಡು ಹಿಡಿದಿಲ್ಲ. ಸ್ಥಳ: ಆಫ್ರಿಕಾದ ಸಹಾರಾ (ಮರುಭೂಮಿ) ವ್ಯಾಪ್ತಿಯಲ್ಲಿ. (ಮುಖ್ಯವಾಗಿ ಕಾಂಗೋ, ಲೈಬೀರಿಯಾ, ಗಿನಿ ಮತ್ತು ಸಿಯೆರಾ ಲಿಯೋನ್‌ನಲ್ಲಿ ಕಾಣಿಸಿಕೊಂಡಿದೆ) == ಎಬೋಲಾ ಎಚ್ಚರಿಕೆ -ದಿ.9-8-2014 == ವಿಶ್ವ ಆರೋಗ್ಯ ಸಂಸ್ಥೆಯು ದಿ 8-8-2014 ದಂದು ಆಫ್ರಿಕಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಣಾಂತಿಕ ‘ಎಬೋಲಾ’ ಕಾಯಿಲೆ ಗಂಭೀರ ಅಂತರ¬ರಾಷ್ಟ್ರೀಯ ಮಟ್ಟದಲ್ಲಿ ತುರ್ತಾಗಿ ಪರಿಗಣಿಸಬೇಕಾದ ವಿಚಾರ ಎಂದು, ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಘೋಷಿಸಿದೆ. ಇದುವರೆಗೆ ಸುಮಾರು ಒಂದು ಸಾವಿರ ಜನರನ್ನು ಬಲಿ ತೆಗೆದುಕೊಂಡ ಈ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಎಲ್ಲರೂ ಸಹಾಯ ಮಾಡಬೇಕು ಎಂದು ಅದು ಅಂತರರಾಷ್ಟ್ರೀಯ ಸಮುದಾ¬ಯಕ್ಕೆ ಕರೆ ನೀಡಿದೆ. ಪಶ್ಚಿಮ ಆಫ್ರಿಕಾದ ಸುಮಾರು 60 ಕಡೆಗಳಲ್ಲಿ ‘ಎಬೋಲಾ’ ಹಬ್ಬಿದ್ದು ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ತರಾತುರಿಯಲ್ಲಿ ಜಿನಿವಾದಲ್ಲಿ ಎರಡು ದಿನ ಸಭೆ ನಡೆಸಿ ‘ಜಾಗತಿಕ ಆರೋಗ್ಯ ತುರ್ತು ಸ್ಥಿತಿ’ ಘೋಷಣೆ ಮಾಡಿದರು ಕಳೆದ 40 ವರ್ಷಗಳಲ್ಲಿ ಸಾಂಕ್ರಾ¬ಮಿಕ ರೋಗವೊಂದು ಇಷ್ಟೊಂದು ವ್ಯಾಪಕವಾಗಿ ಹಬ್ಬಿದ ಉದಾಹರಣೆ ಇಲ್ಲ. ಆದ್ದರಿಂದ ಇದೊಂದು ಜಾಗತಿಕ ಗಂಡಾಂತರವೆಂದು ಭಾವಿಸಿ ತೊಂದರೆಯಲ್ಲಿ ಇರುವ ದೇಶಗಳಿಗೆ ಇತರ ರಾಷ್ಟ್ರಗಳು ಎಲ್ಲಾ ರೀತಿಯ ನೆರವು ನೀಡಬೇಕು ಎಂದು ಸಂಸ್ಥೆಯ ನಿರ್ದೇಶಕಿ ಡಾ. ಮಾರ್ಗರೆಟ್ ಚಾನ್ ಮನವಿ ಮಾಡಿದ್ದಾರೆ. ಪಶ್ಚಿಮ ಆಫ್ರಿಕಾ ದೇಶಗಳಾದ ಲೈಬೀರಿಯಾ, ಗಿನಿ ಮತ್ತು ಸಿಯೆರಾ ಲಿಯೋನ್‌ನಲ್ಲಿ ಈ ರೋಗವು ಭಾರಿ ಅನಾಹುತ ಎಸಗಿದೆ ಭಾರತ ದೇಶದಲ್ಲಿ ಎಬೋಲಾ ಕಾಣಿಸಿಕೊಳ್ಳದಿದ್ದರೂ ಸರ್ಕಾರ ಅಗತ್ಯ ಮುನ್ನೆ¬ಚ್ಚರಿಕೆ ತೆಗೆದುಕೊಂಡಿದೆ. ವೈರಾಣು ಕಾಣಿಸಿಕೊಂಡ ದೇಶಗಳಿಂದ ಭಾರತಕ್ಕೆ ಬರುವ ಜನರ ಮೇಲೆ ನಿಗಾ ವಹಿಸಲಾಗಿದೆ ಎಂದಿದ್ದಾರೆ ಆರೋಗ್ಯ ಸಚಿವರು. ಇದೇ ವೇಳೆ ಎಬೋಲಾ ಸೋಂಕು ಕಂಡುಬಂದಿರುವ ದೇಶಗಳಿಗೆ ಪ್ರವಾಸ ಕೈಗೊಳ್ಳದಿರಲು ಭಾರತೀಯರಿಗೆ ಸರ್ಕಾರ ಸೂಚಿಸಿದೆ. ಎಬೋಲಾ ಸೋಂಕು ಪತ್ತೆಯಾದ ದೇಶಗಳಲ್ಲಿ ಅಂದಾಜು 45,000 ಭಾರತೀಯರು ಇದ್ದಾರೆ. ವಿಶ್ವಸಂಸ್ಥೆ (ಪಿಟಿಐ): ಪಶ್ಚಿಮ ಆಫ್ರಿಕಾದಲ್ಲಿ ತೀವ್ರವಾಗಿ ಹರಡುತ್ತಿರುವ ಮಾರಣಾಂತಿಕ ಎಬೋಲಾ ವೈರಸ್‌ ಸೋಂಕಿನ ಪರಿಣಾಮ ಹತ್ತು ಲಕ್ಷಕ್ಕೂ ಹೆಚ್ಚು ಜನರ ಮೇಲೆ ಉಂಟಾಗಿದ್ದು, ತಕ್ಷಣದಲ್ಲಿ ಸೋಂಕಿನ ನಿವಾರಣೆ ಸಾಧ್ಯವಿರದ ಕಾರಣ ಸೋಂಕು ಹರಡದಂತೆ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕಿ ಮಾರ್ಗರೇಟ್‌ ಚಾನ್‌ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ‘ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಮಾರಣಾಂತಿಕ ಎಬೋಲಾ ವೈರಸ್‌ ಸೋಂಕಿನ ಪರಿಣಾಮ ಎದುರಿಸುತ್ತಿದ್ದಾರೆ. ಇವರಿಗೆ ಆಹಾರ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕಿದೆ. ಸೋಂಕು ಹರಡುವುದನ್ನು ತಡೆಯಲು ವಿಶೇಷ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ತೀವ್ರ ಆರೋಗ್ಯ ಬಿಕ್ಕಟ್ಟು ತಲೆದೋರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು. ವಿಶ್ವ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ‘ಮಾರಣಾಂತಿಕ ಎಬೋಲಾ ಸೋಂಕಿನ ನಿವಾರಣೆಗೆ ವಿಶ್ವ ಆರೋಗ್ಯ ಸಂಸ್ಥೆ ಶ್ರಮ ವಹಿಸುತ್ತಿದ್ದು, ವಿಶ್ವ ಸಂಸ್ಥೆಯಿಂದಲೂ ಅಗತ್ಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದ್ದಾರೆ. ಇದುವರೆಗೆ ಎಬೋಲಾ ಸೋಂಕಿಗಾಗಿ ಯಾವುದೇ ಔಷಧಿಯನ್ನು ಕಂಡು ಹಿಡಿಯ¬ಲಾಗಿಲ್ಲ. ಸರ್ಕಾರ ಕೂಡ ಯಾವುದೇ ಹೊಸ ಔಷಧಿಯನ್ನು ಪ್ರಯೋಗಿಸಿ ನೋಡಲು ಅನುಮತಿ ನೀಡಿಲ್ಲ. ಆದರೆ, ಎಬೋಲಾ ತಡೆಯಲು ದಕ್ಷಿಣ ಆಫ್ರಿಕಾ ದೇಶಗಳ ಮಾರುಕಟ್ಟೆಗೆ ಅಮೆರಿಕ ಮೂಲದ ಕಂಪೆನಿಯೊಂದರ ‘ಜಡ್‌ಮ್ಯಾಪ್‌’ ಎನ್ನುವ ಅನಧಿಕೃತ ಔಷಧ ಈಗ ಲಗ್ಗೆ ಇಟ್ಟಿದೆ. ಆದರೆ, ಇದನ್ನು ಪ್ರಯೋಗಿಸಿ ನೋಡಿ ಯಶಸ್ವಿಯಾಗಿದ್ದರ ಬಗ್ಗೆ ಎಲ್ಲೂ ವರದಿಯಾಗಿಲ್ಲ (೧೪-೮-೨೦೧೪) == ರೋಗದ ಆರಂಭಿಕ ಹಾಗೂ ನಂತರದ ಲಕ್ಷಣಗಳು == ರೋಗ ಲಕ್ಷಣ;- ಅತಿಯಾದ ಜ್ವರ ಮತ್ತು ಕೆಲವು ಸಂದರ್ಭಗಳಲ್ಲಿ ನಿಲ್ಲದ ರಕ್ತಸ್ರಾವ. ರೋಗಿಯ ಎಂಜಲು, ವೀರ್ಯ, ರಕ್ತದಿಂದ ರೋಗ ಹರಡುತ್ತದೆ. ರೋಗಿಗಳ ಆರೈಕೆ ಮಾಡುವವರಿಗೆ ರೋಗ ತಗಲುವ ಸಾಧ್ಯತೆ ಹೆಚ್ಚು. 1976ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ರೋಗಕ್ಕೆ ಕಾಂಗೊ ಗಣರಾಜ್ಯದ ನದಿ ‘ಎಬೋಲಾ’ದ ಹೆಸರು ಇಡಲಾಗಿದೆ ಹೆಮರಾಯಿಕ್ ಲಕ್ಷಣವೆಂದರೆ- ರಕ್ತ ಶ್ರಾವ ದೇಹದ ಒಳಗಡೆ ಮತ್ತು ಹೊರಭಾಗದಲ್ಲಿ. (ಚರ್ಮ‍ ಬಿರುಕುಗಳಲ್ಲಿ?) ಆರಂಭಿಕ ಹಂತ : ತಲೆನೋವು, ಗಂಟಲು ನೋವು, ಮಾಂಸಖಂಡ ನೋವು, ಚರ್ಮದಮೇಲೆ ಬೊಕ್ಕೆ, ಜ್ವರ, ತೀವ್ರ ನಿಶಕ್ತಿ. ಬೆಳವಣಿಗೆಯ ಹಂತ : ವಾಂತಿ ಬೇಧಿ, ಆಂತರಿಕ ಮತ್ತು ಬಾಹ್ಯ ರಕ್ತ ಶ್ರಾವ, ಮೂತ್ರ ಪಿಂಡ ಮತ್ತು ಯಕೃತ್ ಕಾರ್ಯದಲ್ಲಿ ತೊಂದರೆ == 14-8-2014 ರವರೆಗಿನ ರೋಗ ಪೀಡಿತರು == ವಿಶ್ವ ಆರೋಗ್ಯ ಸಂಸ್ಥೆಯ ವರದಿ :- == ಎಬೋಲಾರೋಗಕ್ಕೆ ಲಸಿಕೆ-ಔಷಧಿ == ಇದುವರೆಗೆ ಎಬೋಲಾ ಸೋಂಕಿಗಾಗಿ ಯಾವುದೇ ಔಷಧಿಯನ್ನು ಕಂಡು ಹಿಡಿಯಲಾಗಿಲ್ಲ. ಸರ್ಕಾರ ಕೂಡ ಯಾವುದೇ ಹೊಸ ಔಷಧಿಯನ್ನು ಪ್ರಯೋಗಿಸಿ ನೋಡಲು ಅನುಮತಿ ನೀಡಿಲ್ಲ. ಆದರೆ, ಎಬೋಲಾ ತಡೆಯಲು ದಕ್ಷಿಣ ಆಫ್ರಿಕಾ ದೇಶಗಳ ಮಾರುಕಟ್ಟೆಗೆ ಅಮೆರಿಕ ಮೂಲದ ಕಂಪೆನಿಯೊಂದರ ‘ಜಡ್‌¬ಮ್ಯಾಪ್‌’() ಎನ್ನುವ ಅನಧಿಕೃತ ಔಷಧ ಈಗ ಲಗ್ಗೆ ಇಟ್ಟಿದೆ. ಆದರೆ, ಇದನ್ನು ಪ್ರಯೋಗಿಸಿ ನೋಡಿ ಯಶಸ್ವಿಯಾಗಿದ್ದರ ಬಗ್ಗೆ ಎಲ್ಲೂ ವರದಿಯಾಗಿಲ್ಲ,,(15/08/2014);ಆ ಔಷಧವನ್ನು ಸದ್ಯಕ್ಕೆ ಅಮೆರಿಕ, ಯೂರೋಪ್‌ನಿಂದ ಆಫ್ರಿಕಕ್ಕೆ ಹೋಗಿದ್ದ ಬಿಳಿ ಜನರಿಗೆ ಮಾತ್ರ ಕೊಡಲಾಗುತ್ತಿದೆ. (??) == ಎಬೋಲಾ ವೈರಸ್ == ಎಬೋಲಾ ಮತ್ತು ಮಾರ್‌ಬರ್ಗ್ ಒಂದೇ ಬಗೆಯ ವೈರಾಣುಗಳು ()ಅವು ಹತ್ತಿರದ ಸಂಬಂಧಿಗಳು. ೧೯೭೦//1970 ರ ಹೊತ್ತಿಗೆ ಮಾರ್‌ಬರ್ಗ್ ರೋಗ ೧೫೦೦//1500 ಕ್ಕೂ ಹೆಚ್ಚುಜನರ ಸಾವಿಗೆ ಕಾರಣವಾಗಿದೆ. ಅದು ಆಫ್ರಿಕಾದ ಸತ್ತ ಮಂಗಗಳ ದೇಹದ ಭಾಗಗಳನ್ನು ಪರೀಕ್ಷಿಸಿದ ಕೆಲಸಗಾರರಿಗೆ ಮತ್ತು ಅವರಿಂದ ಇತರ ಮಾನವರಿಗೆ ಹಬ್ಬಿದೆ. ಅದೂ ಕೂಡ ರಕ್ತ ಶ್ರಾವ ಮೊದಲಾದ ಎಬೊಲಾದ ರೋಗ ಲಕ್ಷಣಗಳನ್ನು ಹೊಂದಿದೆ. ಇಲೆಕ್ಟ್ರಾನಿಕ್ ಸೂಕ್ಷ್ಮ ದರ್ಶಕ ಯಂತ್ರದಿಂಧ ನೋಡಿದಾಗ ಅದು ಹಾಗೂ ಎಬೋಲ ವೈರಸ್ ಇಂಗ್ಲಷ್ ಯು /ʊ ನಂತೆ ಅಥವಾ ಚಿಕ್ಕ ದಾರದ ತುಂಡುಗಳಂತೆ ಕಾಣುವುದು. ಮಾರ್‌ಬರ್ಗ್ ವೈರಾಣುವನ್ನು೧೯೬೭//1967 ರಲ್ಲಿ ಜರ್ಮನಿಯ . ಮಾರ್‌ಬರ್ಗ್ ಊರಿನ ಪ್ರಯೋಗ ಶಾಲೆಯಲ್ಲಿ ಬೇರ‍್ಪಡಿಸಿ ಪತ್ತೆಹಚ್ಚಲಾಯಿತು. ಆದ್ದರಿಂದ ಆ ಹೆಸರು ಬಂದಿದೆ. ಕಾಂಗೋ ರಾಜ್ಯದ ಎಬೋಲಾ ನದಿಯ ಹತ್ತಿರ ೧೯೭೬//1976 ರಲ್ಲಿ ಮೊದಲಿಗೆ ಈ ಎಬೋಲಾ ರೋಗ ಕಾರಕ ವೈರಾಣು ಕಾಣಿಸಿಕೊಂಡಿದ್ದು ಪತ್ತೆಯಾದ್ದರಿಂದ ಅದಕ್ಕೆ ಆ ಹೆಸರು ಕೊಡಲಾಗಿದೆ. ಈ ಎಬೋಲಾ ರೋಗದಿಂದ ಬಹಳ ಸಂಖ್ಯೆಯ ಗೊರಿಲ್ಲಾ ಮತ್ತು ಚಿಂಪಾಂಜಿಗಳು ಸತ್ತಿವೆ. ಅವುಗಳ ಸಂಪರ್ಕದಿಂದ ಮಾನವರಿಗೆ ಈ ರೋಗ ಅಂಟಿದೆ.(ಆಧಾರ:ಎನ್ಕಾರ್ಟ) ಎಬೋಲಾ ಮತ್ತು ಮಾರ್‌ಬರ್ಗ್ ವೈರಾಣುಗಳು (), ಇಲೆಕ್ಟ್ರಾನಿಕ್ ಸೂಕ್ಷ್ಮ ದರ್ಶಕ ಯಂತ್ರದಿಂಧ ನೋಡಿದಾಗ-[ ʆ .. ʃ .. ₰ ..ڪ ..ʊ ..-]ಈ ರೀತಿ ಕಾಣುತ್ತವೆ == ಆಧಾರ == ಪ್ರಜಾವಾಣಿ[[೩]] ವಿಶ್ವಾರೋಗ್ಯ ಸಂಸ್ಥೆ : [[://..//20140812204511/://...//--//-----/-/3058----1--1--24-2011. 2014-08-12 ವೇಬ್ಯಾಕ್ ಮೆಷಿನ್ ನಲ್ಲಿ.]] ನಾಗೇಶ ಹೆಗಡೆ -ಪ್ರಜಾವಾಣಿ.[] ://..//2014_Ebola_outbreak == ಉಲ್ಲೇಖ ==