ಎಮ್.ಎಲ್.ಉಸ್ತಾದರು ವಿಧಾನ ಸಭೆಯ ಮಾಜಿ ಸದಸ್ಯರು, ಸಚಿವರು ಹಾಗೂ ರಾಜಕೀಯ ಧುರೀಣರು. == ಜನನ == ಎಮ್.ಎಲ್.ಉಸ್ತಾದರು ವಿಜಯಪುರ ನಗರದಲ್ಲಿ ಜನಿಸಿದ್ದರು. == ನಿರ್ವಹಿಸಿದ ಹುದ್ದೆಗಳು == ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿದ್ದರು. 1985ರಲ್ಲಿ ಕಾಂಗ್ರೇಸ್ ಪಕ್ಷದಿಂದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದ್ದರು. ನಂತರ 1989 ಮತ್ತು 1999ರಲ್ಲಿ ಕಾಂಗ್ರೇಸ್ ಪಕ್ಷದಿಂದ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನ ಸಭೆಗೆ ಆಯ್ಕೆಯಾದರು. 1990ರಲ್ಲಿ ಎಸ್.ಬಂಗಾರಪ್ಪನವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದರು. 1999ರಲ್ಲಿ ಎಸ್.ಎಮ್.ಕೃಷ್ಣರವರ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ಸಚಿವರಾಗಿದ್ದರು. 1994ರಲ್ಲಿ ಜೆಡಿ ಇಂದ ಹಾಗೂ 2004ರಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಪರಾಭವಗೊಂಡರು. == ನಿಧನ == 31ನೇ ಜನೇವರಿ 2007ರಲ್ಲಿ 58ನೇ ವಯಸ್ಸಿನಲ್ಲಿ ಹೃದಯಾಗಾತದಿಂದ ನಿಧನರಾದರು. == ಉಲ್ಲೇಖಗಳು ==