ಎಮ್.ಕೆ.ವರಗಿರಿಯವರು ೧೯೧೨ ಜನೆವರಿ ೨೧ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಜನಿಸಿದರು. == ಶಿಕ್ಷಣ ,ವೃತ್ತಿ == ಇವರ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣ ರಾಣಿಬೆನ್ನೂರು ತಾಲೂಕಿನಲ್ಲಿ ಜರುಗಿದವು. ಬಿ.ಎ. ಪದವಿಯನ್ನು ವರಗಿರಿಯವರು ಪುಣೆಯಲ್ಲಿ ಪಡೆದರು. ಎಮ್.ಎ. ಹಾಗು ಎಮ್.ಇಡಿ ಪದವಿಗಳನ್ನು ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ಆಬಳಿಕ ಶಿಕ್ಷಣಾಧಿಕಾರಿಗಳಾಗಿ ಧಾರವಾಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದರು. == ಸಾಹಿತ್ಯ == ಗಂಗಾಸಾನಿ (ಕಾದಂಬರಿ) ಪ್ರೇಮತರಂಗಿಣಿ (ಕಥಾ ಸಂಕಲನ) ದ್ಯಾಮ-ಕಂಚಿ (ಕಥಾಸಂಕಲನ) (ದ್ಯಾಮ-ಕಂಚಿಯು ನಾಟಕವಾಗಿ ರೂಪಾಂತರಿಸಲ್ಪಟ್ಟು ಧಾರವಾಡ ಆಕಾಶವಾಣಿಯಿಂದ ಪ್ರಸಾರಿತವಾಯಿತು, ಅಲ್ಲದೆ ನೀನಾಸಂದಿಂದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಸಹ ಪ್ರಯೋಗಿಸಲ್ಪಟ್ಟಿತು. ಎಮ್.ಕೆ.ವರಗಿರಿಯವರು "ಖೋ" ಕಾದಂಬರಿಯ ಸಹಲೇಖಕರು. (ಈ ಕಾದಂಬರಿಯು ೧೯೫೮ರಲ್ಲಿ ಧಾರವಾಡದ ಮನೋಹರ ಗಂಥಮಾಲೆಯಿಂದ ಪ್ರಕಟವಾಗಿದ್ದು, ಪ್ರಯೋಗಾರ್ಥವಾಗಿ ಈ ಕಾದಂಬರಿಯನ್ನು ಹನ್ನೊಂದು ಜನ ಲೇಖಕರು ಬರೆದಿದ್ದಾರೆ.) ಎಂ.ಕೆ.ವರಗಿರಿಯವರು ೨೦೦೬ ಮೇ ೩ರಂದು ನಿಧನರಾದರು.