ಎರ್ಗೊಸ್ಟೀರಾಲ್: ವಿಕಾಸದ ದೃಷ್ಠಿಯಿಂದ ಹಿಂದುಳಿದವೆಂದು ಹೇಳಲಾದ ಸಸ್ಯಗಳಾದ ಶಿಲೀಂಧ್ರ ಬೂಸ್ಟುಗಳಲ್ಲಿ ದೊರೆಯುವ ಒಂದು ಸ್ಟೀರಾಯ್ಡ್‌ ಆಲ್ಕೊಹಾಲ್. ಇದನ್ನು ಮೊದಲ ಬಾರಿಗೆ ರೈ ಮತ್ತು ಇನ್ನು ಹಲವು ಧಾನ್ಯಗಳ ಮೇಲೆ ಬರುವ ಎರ್ಗಟ್ ಬೂಸ್ಟಿನಿಂದ ಪಡೆದುದರಿಂದ ಈ ಸಂಯುಕ್ತಕ್ಕೆ ಎರ್ಗೊಸ್ಟೀರಾಲ್ ಎಂದು ಹೆಸರಾಯಿತು. ಎರ್ಗೊಸ್ಟೀರಾಲ್ ಮತ್ತು ಅದರ ಕೆಲವು ವ್ಯುತ್ಪನ್ನ ಮತ್ತು ಸಂಬಂಧಿಗಳು ಹಲವು ನಿರ್ದಿಷ್ಟ ತಳಿಯ ಯೀಸ್ಟ್‌, ಆಸ್ಪರ್ಜಿಲಸ್ ಮತ್ತು ಪೆನ್ಸಿಲಿನ್ ಬೂಸ್ಟುಗಳಲ್ಲಿ ದೊರೆಯುತ್ತವೆ. ವಾಣಿಜ್ಯ ಪ್ರಮಾಣದ ತಯಾರಿಕೆಗೆ ಇವೇ ಮುಖ್ಯ ಆಕರಗಳು. ಈ ಮುಂದೆ ತೋರಿಸಿರುವ ಎರ್ಗೊಸ್ಟೀರಾಲ್ಸಮಘಟಕಗಳನ್ನು (ಐಸೋಮರ್ಸ್‌) ಎರ್ಗೊಸ್ಟೀರಾಲಿನಿಂದ ತಯಾರಿಸಬಹುದು. == ಔಷಧ ತಯಾರಿಕೆಯಲ್ಲಿ == ಎರ್ಗೊಸ್ಟೀರಾಲಿನ ರಚನಾ ರಹಸ್ಯದ ಶೋಧನೆಯಲ್ಲಿ ವಿಂಡಾಸ್ ಮತ್ತು ಆತನ ಸಹೋದ್ಯೋಗಿಗಳ ಕಾಣಿಕೆ ಮುಖ್ಯವಾದುದು. ಇದನ್ನು ಪ್ರಯೋಗ ಶಾಲೆಯಲ್ಲಿಯೂ ಸಂಯೋಜಿಸಲಾಗಿದೆ ಮತ್ತು ಇದರ ಜೈವಿಕ ಉತ್ಪಾದನೆಯ ಬಗೆಯನ್ನೂ ಅರಿಯಲಾಗಿದೆ. ಎರ್ಗೊಸ್ಟೀರಾಲನ್ನು ನಿಯಂತ್ರಿತ ರೀತಿಯಲ್ಲಿ ಅತಿನೇರಿಳೆ ವಿಸರಣಕ್ಕೆ ಒಳಪಡಿಸಿ ಕ್ಯಾಲ್ಸಿಫೆರಾಲ್ ಅಥವಾ ಜೀವಾತು-ಆ2 ಸಂಯುಕ್ತವನ್ನು ತಯಾರಿಸಬಹುದು. ಅಲ್ಪಪ್ರಮಾಣದಲ್ಲಿ ವೈದ್ಯಕೀಯ ಸಂಶೋಧನೆಗಳಲ್ಲೂ ಬಹುಮಟ್ಟಿಗೆ ಜೀವಾತು ಆ2 ತಯಾರಿಸಲೂ ಎರ್ಗೊಸ್ಟೀರಾಲನ್ನು ಉಪಯೋಗಿಸಲಾಗುತ್ತಿದೆ. == ಬಾಹ್ಯ ಸಂಪರ್ಕಗಳು == () 2007-10-11 ವೇಬ್ಯಾಕ್ ಮೆಷಿನ್ ನಲ್ಲಿ. (2005)